ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್ ನಟಿ ಮಂಚು ಲಕ್ಷ್ಮಿಯ ಬಗ್ಗೆ ವಿಶೇಷ ಪರಿಚಯ ಅಗತ್ಯ ಬೇಕಿಲ್ಲ. ಟಾಲಿವುಡ್ ಆಕೆಗೆ ವಿಶಿಷ್ಟವಾದ ಗುರುತನ್ನು ತಂದುಕೊಟ್ಟಿದೆ. ನಟ ಮೋಹನ್ ಬಾಬು ಮಗಳು, ಜೊತೆಗೆ ಸಾಂದರ್ಭಿಕವಾಗಿ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿರುವ ಈಕೆ ಇತ್ತೀಚೆಗೆ ಪ್ರಶಸ್ತಿ ಸಮಾರಂಭವೊಂದರಲ್ಲಿ ಲಕ್ಷ್ಮಿ ಮಾಡಿದ ಕೆಲಸ ವೈರಲ್ ಆಗಿದೆ. ದುಬೈನಲ್ಲಿ SIIMA ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕ್ಯಾಮೆರಾಗೆ ಅಡ್ಡ ಬಂದ ವ್ಯಕ್ತಿಗೆ ಬಾರಿಸಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ರೆಡ್ ಕಾರ್ಪೆಟ್ ಮೇಲೆ ನಿಂತು ಲಕ್ಷ್ಮಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದಾಗ ವ್ಯಕ್ತಿಯೊಬ್ಬ ಕ್ಯಾಮರಾ ಮುಂದೆ ನಡೆದಿದ್ದಾನೆ. ಕೂಡಲೇ ಆತನ ಬೆನ್ನಿಗೆ ನಯವಾಗಿ ತಟ್ಟಿದ್ದಾರೆ. ಅದೇ ವೇಳೆ ಅಡ್ಡ ಬಂದ ಮತ್ತೊಬ್ಬ ವ್ಯಕ್ತಿಯನ್ನು ಕೂಡ ಗದರಿಸಿ ನಿಲ್ಲಿಸಿದರು. ಇದೀಗ ಈ ಕುರಿತ ವಿಡಿಯೋ ಹೊರಬಿದ್ದಿದ್ದು, ನೆಟ್‌ನಲ್ಲಿ ವೈರಲ್ ಆಗಿದೆ.
ఎవడ్రా మా లచ్చక్క మాట్లాడే అప్పుడు మధ్యలో అడ్డం వస్తున్నారు ని అవ్వ 😁
హాల్లో డుర్ go behind the camera dude🤣@LakshmiManchu pic.twitter.com/Ry5FBNyN3A
— 𝐉𝐚𝐲𝐚𝐧𝐭𝐡 𝐆𝐨𝐮𝐝 🇸𝐈𝐍𝐆𝐋𝐄 (@jayanthgoudK) September 21, 2023