ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಿ20೦ ಶೃಂಗಸಭೆಯನ್ನು ಯಶಸ್ವಿಯಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಜಿ20 ಟೀಂ ಜೊತೆ ಪ್ರಧಾನಿ ಮೋದಿ ಇಂದು ಲಂಚ್ ಮಾಡಲಿದ್ದಾರೆ.
ಭಾರತ್ ಮಂಟಪದಲ್ಲಿ ಸಂವಾದ ಹಾಗೂ ಲಂಚ್ ವ್ಯವಸ್ಥೆ ಮಾಡಲಾಗಿದೆ. ಪ್ರಧಾನಿ ಮೋದಿ ಸಭೆಯಲ್ಲಿ ಮಾತನಾಡಲಿದ್ದು, ಸಂವಾದ ನಡೆಯಲಿದೆ. ಒಟ್ಟಾರೆ 3,000 ಜನರು ಸಂವಾದದಲ್ಲಿ ಭಾಗಿಯಾಗಲಿದ್ದಾರೆ.
ಯಾವುದೇ ಕಾರ್ಯಕ್ರಮ ಯಶಸ್ವಿಯಾಗಬೇಕು ಎಂದಾದರೆ ಅದಕ್ಕೆ ಹಿಂಬದಿಯಲ್ಲಿ ಸಾಕಷ್ಟು ಮಂದಿ ಶ್ರಮಪಟ್ಟು ಕೆಲಸ ಮಾಡಿರುತ್ತಾರೆ. ಚಾಲಕರು. ಕ್ಲೀನರ್‌ಗಳು, ವೇಟರ್‌ಗಳು, ಎಲೆಕ್ಟ್ರಿಶಿಯನ್ಸ್ ಹೀಗೆ ಸಾಕಷ್ಟು ಮಂದಿ ಕಾರ್ಯನಿರ್ವಹಿಸಿರುತ್ತಾರೆ.
ವಿವಿಧ ಇಲಾಖೆಯ ಸಿಬ್ಬಂದಿಗಳು, ಸಚಿವರು ಹಾಗೂ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಂವಾದದ ನಂತರ ಪ್ರಧಾನಿ ಮೋದಿ ಎಲ್ಲರ ಜೊತೆ ಭೋಜನ ಸೇವಿಸಲಿದ್ದಾರೆ.