ಮಂದನಾ ಶತಕ, ಆಶಾ ಶೋಭನಾ ಸ್ಪಿನ್ ದಾಳಿ: ಆಫ್ರಿಕಾ ವಿರುದ್ಧ ಭಾರತ ಮಹಿಳಾ ತಂಡಕ್ಕೆ ಗೆಲುವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಮತಿ ಮಂದನಾ (117 ರನ್, 127 ಎಸೆತ, 12 ಬೌಂಡರಿ, 1 ಸಿಕ್ಸರ್) ಸಿಡಿಸಿದ ಭರ್ಜರಿ ಶತಕ ಹಾಗೂ ಪದಾರ್ಪಣೆಯಲ್ಲಿ ಆಶಾ ಶೋಭನಾ (21ಕ್ಕೆ 4) ನಡೆಸಿದ ಸ್ಪಿನ್ ದಾಳಿಯ ನೆರವಿನಿಂದ ಭಾರತ ಮಹಿಳಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ 143 ರನ್‌ಗಳ ಬೃಹತ್ ಗೆಲುವು ದಾಖಲಿಸಿದೆ.

ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಹರ್ಮಾನ್‌ಪ್ರೀತ್ ಕೌರ್ ಪಡೆ 1-0 ಮುನ್ನಡೆ ಸಾಧಿಸಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಶೆಫಾಲಿ ವರ್ಮ (7), ಡಿ. ಹೇಮಲತಾ (12), ನಾಯಕಿ ಹರ್ಮಾನ್‌ಪ್ರೀತ್ ಕೌರ್ (10), ಜೆಮೀಮಾ ರೋಡ್ರಿಗಸ್ (17) ಹಾಗೂ ರಿಚಾಘೋಷ್ (3) ಅಗ್ರ ಕ್ರಮಾಂಕ ಬ್ಯಾಟರ್‌ಗಳ ವೈಲ್ಯದಿಂದ 99 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತು.

ಈ ವೇಳೆ ಸ್ಮತಿ ಮಂದನಾ ಹಾಗೂ ದೀಪ್ತಿ ಶರ್ಮ (37 ರನ್, 48 ಎಸೆತ, 3 ಬೌಂಡರಿ) ಜೋಡಿ 6ನೇ ವಿಕೆಟ್‌ಗೆ ನಡೆಸಿದ 81 ರನ್‌ಗಳ ಜತೆಯಾಟದಿಂದ ಚೇತರಿಸಿಕೊಂಡು 8 ವಿಕೆಟ್‌ಗೆ 265 ರನ್‌ಗಳ ಸವಾಲಿನ ಮೊತ್ತ ಪೇರಿಸಿತು.

ಪ್ರತಿಯಾಗಿ ನಿರಂತರ ವಿಕೆಟ್ ಕಳೆದುಕೊಂಡ ದ.ಆಫ್ರಿಕಾ, 37.4 ಓವರ್‌ಗಳಲ್ಲಿ 122 ರನ್‌ಗಳಿಗೆ ಸರ್ವಪತನ ಕಂಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!