ಮಂಡ್ಯದಲ್ಲಿ ಪುಡಿ ರೌಡಿಗಳಿಂದ ಅಟ್ಟಹಾಸ: ಯುವಕನನ್ನು ಸ್ಮಶಾನಕ್ಕೆ ಕರೆದೊಯ್ದು ಹಲ್ಲೆ

ಹೊಸದಿಗಂತ ವರದಿ,ಮಂಡ್ಯ :

ನಗರದಲ್ಲಿ ಪುಡಿ ರೌಡಿಗಳು ಅಟ್ಟಹಾಸ ಮೆರೆದಿದ್ದಾರೆ. ಯುವಕನೊಬ್ಬನನ್ನು ಸ್ಮಶಾನಕ್ಕೆ ಕರೆತಂದು ಲಾಂಗು-ಮಚ್ಚು ಝಳಪಿಸಿ ಮನಸೋಇಚ್ಛೆ ಥಳಿಸಿದ್ದಾರೆ. ಇಷ್ಟಲ್ಲದೆ ಕೃತ್ಯದ ವೀಡಿಯೋವನ್ನು ಫೇಸ್‌ಬುಕ್‌ನಲ್ಲಿ ಲೈವ್ ಮಾಡಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ನಾಲ್ಕೈದು ಯುವಕರು ಯುವಕನೊಬ್ಬನನ್ನು ಸ್ಮಶಾನಕ್ಕೆ ಎಳೆದುತಂದಿದ್ದಾರೆ. ಆತನನ್ನು ಸುತ್ತುವರೆದಿರುವ ಪುಡಿ ರೌಡಿಗಳು ಆತನ ಸುತ್ತ ಸುತ್ತುತ್ತಾ ಮನಬಂದಂತೆ ನಿಂದಿಸಿದ್ದಾರೆ. ಯುವಕ ತನ್ನನ್ನು ಬಿಟ್ಟುಬಿಡುವಂತೆ ಅಂಗಲಾಚಿದರೂ ಬಿಡದೆ ಆತನಿಗೆ ಥಳಿಸಿದ್ದಾರೆ. ಪೊಲೀಸರು, ಕಾನೂನಿನ ಭಯವೇ ಇಲ್ಲದಂತೆ ವರ್ತಿಸಿರುವುದು ಪೂರ್ವಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪುಡಿ ರೌಡಿಗಳು ನಡೆಸಿದ ಕೃತ್ಯದಿಂದ ಹೆದರಿದ ಯುವಕ ಇನ್ನೆಂದಿಗೂ ಮಂಡ್ಯಕ್ಕೆ ಬರುವುದಿಲ್ಲ, ನನ್ನನ್ನು ಬಿಟ್ಟುಬಿಡಿ ಎಂದು ಬೇಡಿಕೊಂಡಿದ್ದಾನೆ. ಆದರೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಯುವಕನ ಮೇಲೆ ದರ್ಪ ಪ್ರದರ್ಶಿಸಿರುವುದು ಕಂಡುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!