ಹೊಸದಿಗಂತ ವರದಿ,ಮೈಸೂರು:
ಅಲ್ಲಾಹು ಅಕ್ಬರ್ ಎಂದು ಕೂಗಿದ್ದ ಮಂಡ್ಯದ ಯುವತಿ ಮುಸ್ಕಾನ್ ಭಾರತದ ಶ್ರೇಷ್ಠ ಮಹಿಳೆ ಎಂದು ಹೇಳಿರುವ ಅಲ್‌ಖೈದಾ ಮುಖ್ಯಸ್ಥ ಆಲ್ ಜವಾಹಿರಿಯನ್ನ ಕೂಡಲಲೇ ಬಂಧಿಸುವoತೆ ಮಾಜಿ ಎಂಎಲ್‌ಸಿ ಸಿಎಂ ಇಬ್ರಾಹಿಂ ಸವಾಲು ಹಾಕಿದ್ದಾರೆ.
ಬುಧವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಲ್ ಖೈದಾ, ಪಾಲಾ ಖೈದಾ ಎಂದು ಇವರೇ ಸೃಷ್ಟಿ ಮಾಡುತ್ತಿದ್ದಾರೆ. ಅಲ್ ಖೈದಾ ಇದ್ದರೆ ಅವರನ್ನು ಹುಡುಕಿ ಬಂಧಿಸಿ. ಸುಮ್ಮನೆ ಏನೇನೋ ಮಾತಾಡಬೇಡಿ ಎಂದರು.
ಮುಸ್ಕಾನ್‌ಗೂ ಅಲ್‌ಖೈದಾಗೂ ಯಾವುದೇ ಸಂಬoಧವಿಲ್ಲ. ಮುಸ್ಕಾನ್‌ಗೂ ಆ ವಿಡಿಯೋ ಸಂಬoಧವಿಲ್ಲ.
ಅಲ್‌ಖೈದಾ ಕರ್ನಾಟಕಕ್ಕೆ ಬಂದಿಲ್ಲ, ಬರುವುದಕ್ಕೆ ಸಾಧ್ಯವಿಲ್ಲ. ಇನ್ನು ಸುಖಾಸುಮ್ಮಾನೆ ಮುಸ್ಕಾನ್ ವಿರುದ್ಧ ಆರೋಪ ಮಾಡಲಾಗುತ್ತಿದೆ. ಸಂಬoಧವಿದೆ ಎಂದು ಹೇಳುವವರು ಮತ್ತು ಸರ್ಕಾರಕ್ಕೆ ತಾಕತ್ತಿದ್ರೆ, ಅವನನ್ನ ಬಂಧಿಸಿ ತನಿಖೆ ನಡೆಸಲಿ ಎಂದು ಹೇಳಿದರು.
ಬೆಂಗಳೂರಿನಲ್ಲಿ ನಡೆದ ಯುವಕನ ಕೊಲೆ ವಿಚಾರದಲ್ಲಿ ಗೃಹ ಸಚಿವರು ವಿಭಿನ್ನ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿಯವರಿಗೆ ತಲೆ ಕೆಟ್ಟಿದೆ. ಮಂಗನಿಗೆ ಹೆಂಡ ಕುಡಿಸಿದರೆ ಹೇಗೆ ನೃತ್ಯ ಮಾಡುತ್ತೋ ಹಾಗೇ ಇವರು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.