ಮಂಗಳೂರು ಏರ್ ಪೋರ್ಟ್ ರನ್ ವೇ ಸೇಫ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಮಂಗಳೂರು ಏರ್ ಪೋರ್ಟ್ ಸಮೀಪದ ಗುಡ್ಡ ಕುಸಿದು ರಸ್ತೆ ತುಂಡಾದ ವಿಚಾರಕ್ಕೆ ಸಂಬಂಧಿಸಿ ಮಂಗಳೂರು ವಿಮಾನ ನಿಲ್ದಾಣ ಆಡಳಿತ ಸ್ಪಷ್ಟನೆ ನೀಡಿದ್ದು, ಏರ್ ಪೋರ್ಟ್ ರನ್ ವೇಗೆ ಅಪಾಯವಿಲ್ಲ ಎಂದು ಹೇಳಿದೆ.
ರನ್ ವೇಯ ಎರಡು ತಡೆಗೋಡೆಗಳ ಸುಮಾರು 75-100 ಮೀ. ಕೆಳಗೆ ಮೋರಿ ಕೊಚ್ಚಿ ಹೋಗಿದೆ. ಸ್ಥಳೀಯ ಅಧಿಕಾರಿಗಳು ಮೋರಿ ಕೊಚ್ಚಿಹೋಗುವುದರಿಂದ ಸೃಷ್ಟಿಯಾದ ಕಂದಕವನ್ನು ತುಂಬುತ್ತಿದ್ದಾರೆ. ಅದ್ಯಪಾಡಿ ಮುಖ್ಯ ಕಾಂಕ್ರೀಟ್ ರಸ್ತೆಯ ಒಂದು ಭಾಗವನ್ನು ಸ್ಥಗಿತಗೊಳಿಸಲಾಗಿದೆ. ಈ ತುಂಡಾದ ದಾರಿಯ ಮಧ್ಯಭಾಗದಿಂದ ಒಳಗಿನ ತಡೆಗೋಡೆಗೆ 75 ಮೀ ಅಂತರ ಇದೆ. ಏರ್ ಪೋರ್ಟ್ ‌ಒಳಗಿನ ತಡೆಗೋಡೆಯ ಹಲವು ಮೀಟರ್ ಅಂತರದಲ್ಲಿ ರನ್ ವೇ ಇದೆ. ರನ್ವೇಗೆ ಯಾವುದೇ ಅಪಾಯವಿಲ್ಲ, ಕಾರ್ಯಾಚರಣೆಗಳು ಸಾಮಾನ್ಯವಾಗಿ ನಡೆಯುತ್ತಿವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ಬದಿಯ ತಡೆ ಗೋಡೆಯ ಪಕ್ಕದಲ್ಲೇ ನಿನ್ನೆ ಗುಡ್ಡ ಕುಸಿದು ರಸ್ತೆ ತುಂಡಾಗಿತ್ತು.‌ ಮಂಗಳೂರು ಏರ್ಪೋರ್ಟ್ ನ ರನ್ ವೇ ಅಪಾಯದಲ್ಲಿದೆ ಎನ್ನಲಾಗಿತ್ತು.‌ ಆದರೆ‌ ಮಂಗಳೂರು ಏರ್ ಪೋರ್ಟ್ ಆಡಳಿತ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು, ರನ್ ವೇಗೆ ಅಪಾಯ ಇಲ್ಲ, ಸುರಕ್ಷಿತವಾಗಿದೆ ಎಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!