ಮಂಗಳೂರು ಮೂಲದ ತಾಯಿ, ಮಗಳು ಕೇರಳದ ಕಣ್ಣೂರಿನ ಮನೆಯಲ್ಲಿ ನಿಗೂಢ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಗಳೂರು ಮೂಲದ ತಾಯಿ ಹಾಗೂ ಮಗಳ ಮೃತದೇಹ ಕಣ್ಣೂರು ಜಿಲ್ಲೆಯ ಕೊಟ್ಟಾಳಿಕಾವು ಅಂಚೆಕಚೇರಿ ಸನಿಹದ ಮನೆಯೊಂದರ ಒಳಗೆ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮೃತಪಟ್ಟವರನ್ನು ಪ್ರಾಥಮಿಕ ತನಿಖೆಯಲ್ಲಿ ಸುನಂದಾ ವಿ.ಶೆಣೈ (78), ಪುತ್ರಿ ದೀಪಾ ವಿ.ಶೆಣೈ (44) ಎಂದು ಗುರುತಿಸಲಾಗಿದ್ದು, ಇವರು ಕಳೆದ ಮೂರು ದಿನಗಳ ಹಿಂದೆ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ.
ಈ ಇಬ್ಬರೂ ಕಳೆದ ಮೂರು ದಿವಸದ ಹಿಂದೆ ಮನೆಯಿಂದ ಹೊರಗೆ ತೆರಳಿದ್ದನ್ನು ಕಂಡವರಿದ್ದಾರೆ. ಅದಾದ ಬಳಿಕ ಇವರನ್ನು ಆಸುಪಾಸಿನವರು ಯಾರೂ ಕಂಡಿರಲಿಲ್ಲ. ಇವರಿದ್ದ ಮನೆಯಿಂದ ದುರ್ವಾಸನೆ ಹೊರಬರುತ್ತಿದ್ದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ನೆರೆಮನೆಯವರು ಪರಿಶೀಲಿಸಿದಾಗ ಒಳಗೆ ಮೃತದೇಹಗಳಿರುವುದು ಕಂಡಬಂದಿದೆ.

ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕಾಮಿಸಿ ಮಾಹಿತಿ ಸಂಗ್ರಹಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಮೂಲತ: ಮಂಗಳೂರು ನಿವಾಸಿಗಳಾಗಿರುವ ಇವರು, ಹತ್ತು ವರ್ಷಗಳ ಹಿಂದೆ ಕೊಟ್ಟಾಳಿಗೆ ಆಗಮಿಸಿದ್ದರು. ಸ್ಥಳೀಯರೊಂದಿಗೆ ಹೆಚ್ಚಿನ ಸಂಪರ್ಕ ಹೊಂದಿರಲಿಲ್ಲ ಎಂಬುದು ತನಿಖೆಯಲ್ಲಿ ಬಹಿರಂಗಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!