ಮಂಗನ ಕಾಟದಿಂದ ಹೈರಾಣಾದ ರಾಯ್‌ಪುರದ ಜನತೆ, ಕೋತಿ ಹಿಡಿಯಲು ಅರಣ್ಯ ಇಲಾಖೆ ಪರದಾಟ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಆನೆ, ಕರಡಿಗಳ ಕಾಟದಿಂದ ನೊಂದಿದ್ದ ರಾಯ್‌ಪುರದ ಜನರಿಗೆ ಇದೀಗ ಮಂಗಗಳ ಕಾಟದ ಹೊಸ ತಲೆನೋವು ಶುರುವಾಗಿದ್ದು, 11 ಮಂದಿಯನ್ನು ಒಂಟಿ ಮಂಗವೊಂದು ಕಚ್ಚಿ ಗಾಯಗೊಳಿಸಿವೆ.

ಛತ್ತೀಸ್‌ಗಢದ ಅರಣ್ಯದಿಂದ ಈ ಮಂಗಗಳು ಗ್ರಾಮೀಣ ಭಾಗಗಳಿಗೆ ಬರುತ್ತಿದ್ದು, ಜನರಲ್ಲಿ ಭೀತಿಗೆ ಕಾರಣವಾಗಿದೆ. ದುರ್ಗ ಜಿಲ್ಲೆಯ ಆರು ವಾರ್ಡ್‌ಗಳಲ್ಲಿ ಮಂಗಗಳ ಕಾಟ ಅತಿಯಾಗಿದೆ. ಮಂಗವೊಂದು ತನ್ನ ಹಿಂಡಿನಿಂದ ಬೇರ್ಪಟ್ಟು 11 ಮಂದಿಯ ಮೇಲೆ ದಾಳಿ ನಡೆಸಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರಿಗೆ ತೀವ್ರತರವಾದ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಸ್ಪಿ ಬಂಗಲೆ ಬಳಿಯ ನಿವಾಸಿ ಪೂರ್ಣಿಮಾ ಎಂಬಾಕೆಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಮಂಗನನ್ನು ಹಿಡಿಯಲು ಅರಣ್ಯ ಇಲಾಖೆ ಹರಸಾಹಸ ಪಟ್ಟಿದ್ದು, ಮೂರು ಜಿಲ್ಲೆಗಳ ರಕ್ಷಣಾ ತಂಡಗಳನ್ನು ಕರೆಸಿ ಮಂಗನನ್ನು ಹಿಡಿಯಲು ಕಾರ್ಯಾಚರಣೆ ನಡೆಸಲಾಯಿತು. ಅರಣ್ಯ ಇಲಾಖೆಯ ದುರ್ಗ್ ರಾಜನಂದಗಾಂವ್ ಮತ್ತು ರಾಯಪುರದ ರಕ್ಷಣಾ ತಂಡರಿಂದ ಎರಡು ದಿನಗಳ ಸತತ ಕಾರ್ಯಾಚರಣೆಯಿಂದ ಮಂಗನನ್ನು ಹಿಡಿಯಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!