ಸುಶ್ಮಿತಾ ಸೇನ್‌, ಅಮಿತ್‌ ಶಾ ಹೆಸರಲ್ಲಿ ಮಾವು: ಹೊಸ ತಳಿ ಪರಿಚಯಿಸಿದ ಮ್ಯಾಂಗೋಮ್ಯಾನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಗತ್ತಿಗೆ ‘ಐಶ್ವರ್ಯ’ ಮತ್ತು ‘ಸಚಿನ್’ ಹೆಸರಿನ ವಿಶಿಷ್ಟವಾದ ಮಾವಿನಹಣ್ಣುಗಳನ್ನು ನೀಡಿದ ಭಾರತದ ಮ್ಯಾಂಗೋಮ್ಯಾನ್ ಇದೀಗ ‌ರಡು ಹೊಸ ಪ್ರಭೇದಗಳಿಗೆ ‘ಸುಶ್ಮಿತಾ ಆಮ್’ ಮತ್ತು ‘ಅಮಿತ್ ಶಾ ಆಮ್’ ಎಂದು ನಾಮಕರಣ ಮಾಡಿದ್ದಾರೆ. ಮ್ಯಾಂಗೋ ಮ್ಯಾನ್‌ ಎಂದೇ ಪ್ರಖ್ಯಾತಿ ಗಳಿಸಿರುವ ತೋಟಗಾರಿಕಾ ತಜ್ಞ ಹಾಜಿ ಕಲೀಮುಲ್ಲಾ ಖಾನ್ ಅವರು ಹಣ್ಣುಗಳ ರಾಜ ಮಾವಿನ ಎರಡು ರುಚಿಕರವಾದ ಹೊಸ ಮಿಶ್ರತಳಿಗಳನ್ನು ಅಭಿವೃದ್ಧಿಪಡಿಸಿದ್ದಾರೆ ಮತ್ತು ಪ್ರಸಿದ್ಧ ವ್ಯಕ್ತಿಗಳ ಹೆಸರನ್ನು ಇಟ್ಟಿದ್ದಾರೆ. ಈ ಎರಡು ಮಾವಿನಹಣ್ಣಿನ ಹೊಸ ಪ್ರಭೇದವನ್ನು ಉತ್ತರ ಪ್ರದೇಶದ ಮಲಿಹಾಬಾದ್‌ನಲ್ಲಿರುವ ಅವರ ತೋಟದಲ್ಲಿ ಎರಡನ ಅಭಿವೃದ್ಧಿಪಡಿಸಿ ಬೆಳೆಸಲಾಗಿದೆ.

“ನಾನು ಮೊದಲು ನಟಿ ಐಶ್ವರ್ಯಾ ರೈ ಅವರನ್ನು ನೆನೆಸಿಕೊಂಡು ‘ಐಶ್ವರ್ಯಾ ಆಮ್’ ಎಂದು ಹೆಸರಿಸಿದ್ದೆ. ಆದರೆ ಸುಶ್ಮಿತಾ ಸೇನ್ ಬಗ್ಗೆ ನನಗೆ ಯಾರೋ ಹೇಳಿದ್ದರು. ಅವಳ ಸೌಂದರ್ಯ ಯಾವಾಗಲೂ ಈ ಜಗತ್ತಿನಲ್ಲಿ ಇರಬೇಕೆಂದು ನಾನು ಬಯಸುತ್ತೇನೆ, ಜನರು ಅವಳು ಒಳ್ಳೆಯ ವ್ಯಕ್ತಿ ಎಂದು ನೆನಪಿಸಿಕೊಳ್ಳಬೇಕು. ಅದಕ್ಕಾಗಿಯೇ ಈ ಬಾರಿ ಈ ಮಾವಿನ ತಳಿಯನ್ನು ಅಭಿವೃದ್ಧಿ ಪಡಿಸಿದ್ದೇನೆ ಆಕೆಯ ಹೆಸರನ್ನೇ ಸುಶ್ಮಿತಾ ಎಂದು ಹೆಸರಿಸಿದ್ದೇನೆ” ಎಂದು ಖಾನ್‌ ವಿವರಿಸುತ್ತಾರೆ.

ಹೆಸರಾಂತ ಮಾವು ಬೆಳೆಗಾರ, ಹಾಜಿ ಕಲೀಮುಲ್ಲಾ ಖಾನ್ ಅವರು ವಿಭಿನ್ನ ಮಿಶ್ರತಳಿಗಳನ್ನು ಬೆಳೆಸುತ್ತಿದ್ದಾರೆ ಮತ್ತು ದಶಕಗಳಿಂದ ಸಾರ್ವಜನಿಕ ವ್ಯಕ್ತಿಗಳ ಹೆಸರನ್ನು ಇಡುತ್ತಿದ್ದಾರೆ. 82 ವರ್ಷದ ಅವರು ಮುಲಾಯಂ ಆಮ್, ನಮೋ ಆಮ್, ಸಚಿನ್ ಆಮ್, ಕಲಾಂ ಆಮ್, ಅಮಿತಾಭ್ ಆಮ್ ಮತ್ತು ಯೋಗಿ ಆಮ್ ನಂತಹ 300 ಕ್ಕೂ ಹೆಚ್ಚು ವಿಶಿಷ್ಟವಾದ ಮಾವಿನಹಣ್ಣುಗಳನ್ನು ಬೆಳೆದಿದ್ದಾರೆ.

ತೋಟಗಾರಿಕೆ ಕ್ಷೇತ್ರಕ್ಕೆ ಅವರ ಕೊಡುಗೆಗಳು ಮತ್ತು ಮಾವಿನ ತಳಿಗಳನ್ನು ಸಂರಕ್ಷಿಸಲು ಮತ್ತು ವಿಸ್ತರಿಸಲು ಅವರು ನೀಡಿದ ಕೊಡುಗೆಗಳಿಗಾಗಿ 2008 ರಲ್ಲಿ ಖಾನ್ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!