ದಿಗಂತ ವರದಿ ಪುತ್ತೂರು:
ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಬಪ್ಪಳಿಗೆ ಪ್ರದೇಶದಲ್ಲಿ ಆ.2 ರಂದು ನಸುಕಿನ ಜಾವ ಗುಡ್ಡ ಕುಸಿದು ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿರುವ ಕಾರಣ ಬದಲಿ ರಸ್ತೆಯಾಗಿ ಪುತ್ತೂರು ಪೇಟೆ ಬಳಸಿ ವಾಹನ ಸಂಚರಿಸಬೇಕಾಗಿದೆ. ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಬಪ್ಪಳಿಗೆ ಪ್ರದೇಶದಲ್ಲಿ ಆಗಾಗ ಗುಡ್ಡ ಕುಸಿಯುತ್ತಲೇ ಇದ್ದು ಇದೀಗ ಭಾರಿ ಪ್ರಮಾಣದ ಮಣ್ಣು ರಸ್ತೆಯ ಮೇಲೆ ಬಿದ್ದಿದೆ.
ಮಾಣಿ – ಮೈಸೂರು ನಡುವೆ ಮುಖ್ಯ ರಸ್ತೆಯಲ್ಲಿ ಮಣ್ಣು ಕುಸಿದು ಬಿದ್ದು ಸಂಚಾರ ಸ್ಥಗಿತಗೊಂಡಿರುವ ಕಾರಣ ಪುತ್ತೂರು ಪೇಟೆಗೆ ತಿರುಗುವಲ್ಲೇ ಬ್ಯಾರಿಕೇಡ್ ಹಾಕದೆ ಇರುವುದರಿಂದ ವಾಹನಗಳು ಮಣ್ಣು ಕುಸಿದ ಸ್ಥಳದವರೆಗೆ ಆಗಮಿಸಿ ಮತ್ತೆ ಅಲ್ಲಿಂದ ತಿರುಗಿಸಿ ನಗರದೊಳಗೆ ಸಂಚರಿಸುವಂತಹ ಪರಿಸ್ಥಿತಿ ಉಂಟಾಗಿದೆ. ಬ್ಯಾರಿಕೇಡ್ ಅಳವಡಿಸದೆ ಇದ್ದ ಕಾರಣ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.