ಹೊಸದಿಗಂತ ಪುತ್ತೂರು
ರಾಜ್ಯದಲ್ಲಿ ದಿನೇ ದಿನೇ ಮಳೆರಾಯನ ಅಬ್ಬರ ಹೆಚ್ಚಾಗಿದೆ. ಇದೀಗ ಪುತ್ತೂರಿನ ಬೆಳ್ಳಿಪ್ಪಾಡಿ ಗ್ರಾಮದಲ್ಲಿ ಭಾರೀ ಭೂಕುಸಿತ ಉಂಟಾಗಿದ್ದು ಮೂರು ಮನೆಗಳಿಗೆ ಹಾನಿಯಾಗಿದೆ, ಸದ್ಯ ಭೀಕರ ಘಟನೆಯಲ್ಲಿ ಮನೆಯ ಸದಸ್ಯರು ಅಪಾಯದಿಂದ ಪಾರಾಗಿದ್ದಾರೆ.
ಬೆಳ್ಳಿಪ್ಪಾಡಿ ಗ್ರಾಮದ ಅಂದ್ರಿಗೇರಿನ ಗಂಗಯ್ಯ ಗೌಡ, ಮಹಾಬಲ ಗೌಡ ಎಂಬವರಿಗೆ ಸೇರಿದ ಮನೆಗೆ ಹಾನಿಯಾಗಿದೆ. ಇನ್ನು ಭೂಕುಸಿತದಿಂದ ಬೆಳ್ಳಿಪ್ಪಾಡಿ ಗ್ರಾಮದ ಕೋರಿಯ ವಿಶ್ವನಾಥ ಪೂಜಾರಿ ಎಂಬವರ ಮನೆಗೂ ಹಾನಿಯಾಗಿದೆ.
ಅಷ್ಟೇ ಅಲ್ಲದೆ ಭೂಕುಸಿತ ಉಂಟಾಗಿ ಗಂಗಯ್ಯ ಗೌಡ ಅವರ ಹಟ್ಟಿಯಲ್ಲಿದ್ದ ನಾಲ್ಕು ಜಾನುವಾರು ಸಾವನ್ನಪ್ಪಿವೆ. ಮಹಾಬಲ ಗೌಡ ಅವರ ದನದ ಹಟ್ಟಿಗೂ ಧರೆ ಕುಸಿದು ಮಣ್ಣಿನಡಿ ಎರಡು ಜಾನುವಾರು ಸಿಲುಕಿಕೊಂಡಿವೆ. ವಿಶ್ವನಾಥ ಪೂಜಾರಿ ಅವರ ದನದ ಹಟ್ಟಿಗೂ ಮಣ್ಣು ಬಿದ್ದು ಎರಡು ಜಾನುವಾರು ಮಣ್ಣಿನಡಿ ಸಿಲುಕಿದೆ ಎಂದು ತಿಳಿದು ಬಂದಿದೆ.