ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯ ನಿಷೇಧಿತ ಕಾಂಗ್ಲೀಪಾಕ್ ಕಮ್ಯುನಿಸ್ಟ್ ಪಕ್ಷದ ಆರು ಕಾರ್ಯಕರ್ತರನ್ನು ಬಂಧಿಸಿದ ಘಟನೆ ನಡೆದಿದೆ.
ಆರು ಸದಸ್ಯರನ್ನು ಶುಕ್ರವಾರ ಇಂಫಾಲ್ ಪಶ್ಚಿಮದ ಕೌಟ್ರುಕ್ ಮಖಾ ಲೈಕೈ ಚರ್ಚ್‌ನಿಂದ ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೊತೆಗೆ ಪೂರ್ವ ಇಂಫಾಲ್ ನಲ್ಲಿ ಸುಲಿಗೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಮತ್ತೊಂದು ಗುಂಪಿನ ಇಬ್ಬರು ಸದಸ್ಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ಮಾಹಿತಿ ನೀಡಿದ್ದಾರೆ.
ಸೆಕ್ಮೈ, ಇರಿಲ್ಬಂಗ್, ಕೊಯಿರೆಂಗೈ ಮತ್ತು ಪಟ್ಸೊಯ್ ಪ್ರದೇಶಗಳಲ್ಲಿ ಮರಳು ತುಂಬಿದ ಟ್ರಕ್‌ಗಳಿಂದ ಸುಲಿಗೆ ಮಾಡುತಿದ್ದರು ಎಂಬ ಆರೋಪದ ಮೇಲೆ ಇಂಫಾಲ್ ಪೂರ್ವ ಜಿಲ್ಲೆಯ ಅಚನ್‌ಬಿಗೆ ಮಾನಿಂಗ್ ಲೈಕೈಯಿಂದ ಜಿ5 ಸಂಘಟನೆಯ ಇಬ್ಬರು ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.