ಮಣಿಪುರ ವಿದ್ಯಾರ್ಥಿಗಳ ಹತ್ಯೆ ಪ್ರಕರಣ: CBI ಯಿಂದ 5ನೇ ಆರೋಪಿ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಣಿಪುರದಲ್ಲಿ (Manipur) ಜುಲೈ 6 ರಿಂದ ನಾಪತ್ತೆಯಾಗಿದ್ದ ಇಬ್ಬರು ಮೈತಿ ವಿದ್ಯಾರ್ಥಿಗಳ (Meitei students) ಅಪಹರಣ ಮತ್ತು ಕೊಲೆ (murder) ಪ್ರಕರಣಕ್ಕೆ ಸಂಬಂಧಿಸಿದಂತೆ CBI ಓರ್ವ ವ್ಯಕ್ತಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಪ್ರಕರಣದಲ್ಲಿ ಇದು ಐದನೇ ಬಂಧನವಾಗಿದೆ. ಪೌಲುನ್ ಮಾಂಗ್ ಎಂಬಾತನ್ನು ಮಹಾರಾಷ್ಟ್ರದ ಪುಣೆಯಿಂದ ಬುಧವಾರ ಬಂಧಿಸಿ ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅಕ್ಟೋಬರ್ 16 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಲ್ವರು ಶಂಕಿತರಲ್ಲಿ ಇಬ್ಬರು ಪುರುಷರು, ಪಾವೊಮಿನ್ಲುನ್ ಹಾಕಿಪ್ ಮತ್ತು ಎಸ್ ಮಾಲ್ಸಾಮ್ ಹಾಕಿಪ್, ಮತ್ತು ಇಬ್ಬರು ಮಹಿಳೆಯರು, ಲಿಂಗ್ನಿಚಾಂಗ್ ಬೈಟೆಕುಕಿ ಮತ್ತು ಟಿನ್ನೆಲ್ಹಿಂಗ್ ಹೆಂತಾಂಗ್ ಎಂಬವರನ್ನು ಸಿಬಿಐ ನೇತೃತ್ವದ ಭದ್ರತಾ ಪಡೆಗಳ ತಂಡವು ಅಕ್ಟೋಬರ್ 1 ರಂದು ಇಬ್ಬರು ವಿದ್ಯಾರ್ಥಿಗಳನ್ನು ಅಪಹರಣ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಬಂಧಿಸಿತ್ತು. .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!