ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನೀಶ್ ಸಿಸೋಡಿಯಾಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್, ಇದು ಸತ್ಯದ ಗೆಲುವು ಮತ್ತು ಪಕ್ಷಕ್ಕೆ ದೊಡ್ಡ ಸಮಾಧಾನ ಎಂದು ಬಣ್ಣಿಸಿದ್ದಾರೆ.
“ಇದು ಸತ್ಯಕ್ಕೆ ಸಂದ ಜಯ. ನಾನು ಈ ಹಿಂದೆಯೇ ಹೇಳಿದಂತೆ ಈ ಪ್ರಕರಣದಲ್ಲಿ ಯಾವುದೇ ಸತ್ಯ/ಸಾಕ್ಷಿ ಇಲ್ಲ. ನಮ್ಮ ನಾಯಕರನ್ನು ಬಲವಂತವಾಗಿ ಜೈಲಿಗೆ ಹಾಕಲಾಗಿದೆ. ಮನೀಶ್ ಸಿಸೋಡಿಯಾ ಅವರನ್ನು 17 ತಿಂಗಳು ಜೈಲಿನಲ್ಲಿ ಇರಿಸಲಾಗಿತ್ತು… ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಸಲ್ಲಿಸುತ್ತೇನೆ. ನಮಗೆ ನ್ಯಾಯ ಸಿಕ್ಕಿದೆ ಮತ್ತು ಎಎಪಿ ಪರವಾಗಿ ನಿರ್ಧಾರ ಬಂದಿದೆ ಮತ್ತು ಅರವಿಂದ್ ಕೇಜ್ರಿವಾಲ್ ಮತ್ತು ಸತ್ಯೇಂದ್ರ ಜೈನ್ ಕೂಡ ಶೀಘ್ರದಲ್ಲೇ ಜೈಲಿನಿಂದ ಹೊರಬರಲಿ ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ. ಎಂದು ಎಎಪಿ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ.