ಡೆತ್ ಸರ್ಟಿಫಿಕೇಟ್‌ ಕಳೆದುಕೊಂಡಿದ್ದೇನೆ, ಸಿಕ್ಕವರು ದಯವಿಟ್ಟು ಮರಳಿಸಿ.. ಪತ್ರಿಕೆಯಲ್ಲಿನ ವಿಚಿತ್ರ ಜಾಹಿರಾತು ನೋಡಿ ಕಕ್ಕಾಬಿಕ್ಕಿಯಾದ ಜನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವಿಲಕ್ಷಣ ವಿಚಾರಗಳು ಪ್ರಕಟವಾಗುತ್ತಿರುತ್ತವೆ. ಅಂತಹವುಗಳಲ್ಲಿ ಕೆಲವು ನೋಡಿದ ತಕ್ಷಣ ನಗು ಉಕ್ಕಿಸುತ್ತವೆ. ತನ್ನ ಡೆತ್‌ ಸರ್ಟಿಫಿಕೇಟ್‌ ಕಳೆದುಕೊಂಡಿರುವುದಾಗಿ ವ್ಯಕ್ತಿಯೊಬ್ಬ ಮ್ಯಾನ್ಸ್ ಪತ್ರಿಕೆಯಲ್ಲಿ ನೀಡಿರುವ ಜಾಹೀರಾತು ವೈರಲ್‌ ಆಗಿದ್ದು ಸೋಷಿಯಲ್‌ ಮಿಡಿಯಾದಲ್ಲಿ ನಗುವಿನ ಬಿರುಗಾಳಿ ಎಬ್ಬಿಸಿದೆ.
ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ ಅವರು ಪತ್ರಿಕೆಯಲ್ಲಿ ಪ್ರಕಟವಾದ ಜಾಹೀರಾತಿನ ಫೋಟೋವನ್ನು ಟ್ವಿಟರ್‌ ನಲ್ಲಿ ಹಂಚಿಕೊಂಡಿದ್ದಾರೆ.  ಅದರಲ್ಲಿ ಒಬ್ಬ ವ್ಯಕ್ತಿಯು ತನ್ನ ಸ್ವಂತ ಮರಣ ಪ್ರಮಾಣಪತ್ರವನ್ನು ಕಳೆದುಕೊಂಡಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾನೆ.ಸೆಪ್ಟೆಂಬರ್‌ 7 ರಂದು ಅಸ್ಸಾಂನ ಲುಮ್ಡಿಂಗ್ ಬಜಾರ್‌ನಲ್ಲಿ ನನ್ನ ಮರಣ ಪ್ರಮಾಣಪತ್ರವನ್ನು ಕಳೆದುಕೊಂಡಿದ್ದೇನೆ” ಎಂದು ಜಾಹೀರಾತಿನಲ್ಲಿ ಬರೆಯಲಾಗಿದೆ. ಜೊತೆಗೆ ಕಳೆದುಹೋದ ಪ್ರಮಾಣಪತ್ರದ ನೋಂದಣಿ ಹಾಗೂ ಕ್ರಮಸಂಖ್ಯೆಯನ್ನೂ ನಮೂದಿಸಲಾಗಿದೆ.
ಈ ಜಾಹಿರಾತು ಓದಿದ ಜನರು ಕಕ್ಕಾಬಿಕ್ಕಿಯಾಗಿದ್ದಾರೆ. ಡೆತ್‌ ಸರ್ಟಿಫಿಕೇಟ್‌ ಒಬ್ಬ ವ್ಯಕ್ತಿ ಸತ್ತಾಗ ಮಾತ್ರ ನೀಡುವ ದಾಖಲೆಯಾಗಿದೆ. ಇದು ವೈರಲ್‌ ಆಗುತ್ತಲೇ ಜಾಲತಾಣ ತಮಾಷೆಯ ಕಾಮೆಂಟ್‌ ಗಳಿಂದ ತುಂಬಿಹೋಗಿದೆ. ಈ ವ್ಯಕ್ತಿ ಸ್ವರ್ಗದಿಂದ ಸಹಾಯ ಕೇಳುತ್ತಿದ್ದಾನಾ ಎಂದು ನೆಟಿಜನ್‌ಗಳು ಆಶ್ಚರ್ಯ ಪಡುತ್ತಿದ್ದಾರೆ. ಇನ್ನು ಕೆಲವರು  ಕಳೆದುಹೋದ ಸರ್ಟಿಫಿಕೆಟ್‌ ಸಿಕ್ಕಿದರೆ ಎಲ್ಲಿಗೆ ತಲುಪಿಸಬೇಕು ಎಂದು ತಮಾಷೆಯಾಗಿ ಕೇಳಿದ್ದಾರೆ.
“ಇದು ಭಾರತದಲ್ಲಿ ಮಾತ್ರ ಸಂಭವಿಸುತ್ತದೆ” ಎಂದು ಬಳಕೆದಾರರೊಬ್ಬರು ನಗುವಿನ ಇಮೋಜಿ ಹಂಚಿಕೊಂಡಿದ್ದಾರೆ.

“ಪ್ರಮಾಣಪತ್ರವನ್ನು ನೀಡಲು ಎಲ್ಲಿಗೆ ಬರಬೇಕು, ಸ್ವರ್ಗ ಅಥವಾ ನರಕ?” ಎಂದು ಮತ್ತೊಬ್ಬ ಬಳಕೆದಾರ ಕೇಳಿದ್ದಾರೆ. “ಶ್‌ ಸುಮ್ಮನಿರಿ.. ಇದು ‘ಜಾಹಿರಾತು-ಭೂತ” ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
“ಯಾರಿಗಾದರೂ ಆ ಪ್ರಮಾಣಪತ್ರ ಸಿಕ್ಕರೆ, ದಯವಿಟ್ಟು ಅವರ ಕಳೆದುಕೊಂಡವರಿಗೆ ಹಿಂತಿರುಗಿಸಿ, ಪ್ಲೀಸ್ ಇದನ್ನು ತುರ್ತು ಎಂದು ಪರಿಗಣಿಸಿ, ಇಲ್ಲವಾದರೆ ದೆವ್ವವು ಕೋಪಗೊಳ್ಳುತ್ತದೆʼ ಎಂದು ಮೊತ್ತೊಬ್ಬ ಬಳಕೆದಾರ ಕಿಚಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!