ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ತಮಿಳು ಇಂಡಸ್ಟ್ರಿಯಲ್ಲಿ ಹುಟ್ಟಿಕೊಂಡ ತ್ರಿಷಾ, ಮನ್ಸೂರ್ ಅಲಿ ಖಾನ್ ನಡುವಿನ ವಿವಾದಕ್ಕೆ ಚಿರಂಜೀವಿ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದರು. ಆದರೆ ಈ ಟ್ವೀಟ್ ಬಗ್ಗೆ ಮನ್ಸೂರ್ ಅಸಹನೆ ಹೊರಹಾಕಿದ್ದು, ಚಿರಂಜೀವಿ ಬಗ್ಗೆಯೂ ಮನಬಂದಂತೆ ಮಾತನಾಡಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
“ಚಿರಂಜೀವಿ ಪ್ರತಿ ವರ್ಷ ಹೀರೋಯಿನ್‌ಗಳಿಗೆ ಪಾರ್ಟಿ ಕೊಡುತ್ತಾರೆ. ಯೆಸ್ ಅಫ್‌ಕೋರ್ಸ್ ನನ್ನನ್ನು ಯಾವತ್ತೂ ಅಂತಹ ಪಾರ್ಟಿಗಳಿಗೆ ಕರೆದಿಲ್ಲ ಬಿಡಿ, ಅದು ಅವರ ಇಷ್ಟ. ಆದರೆ, ನನ್ನ ವಿಚಾರದ ಬಗ್ಗೆ ಮಾತನಾಡುವಾಗ ನಿಜವಾಗಿ ಏನಾಯಿತು ಎಂದು ತಿಳಿದುಕೊಳ್ಳಲು ಒಮ್ಮೆ ಫೋನ್ ಮಾಡಿದ್ದರೆ ಚೆನ್ನಾಗಿತ್ತು. ಏನೂ ತಿಳಿಯದೆ ಅವರು ಆಡಿದ ಮಾತುಗಳು ನನ್ನ ಮನ ನೋಯಿಸುವಂತಿದ್ದವು” ಎಂದು ಮನ್ಸೂರ್ ಆರೋಪ ಮಾಡಿದರು.
#MansoorAliKhan Comments on #Chiranjeevi:
👉 Aayana Old Heroines tho Every Year Party Cheskuntadu.
👉 Okasari Naku Call Chesi Asal Em Jarigindhi ani Adagalsindi. pic.twitter.com/b44tLcpSmc— Movies4u Official (@Movies4u_Officl) November 28, 2023
ಚಿರಂಜೀವಿ ಪಕ್ಷ ಸ್ಥಾಪನೆ ಮಾಡಿ, ಅದರಿಂದ ಸಾವಿರಾರು ಕೋಟಿ ರೂ, ಸಂಪಾದಿಸಿದ್ದಾರೆ. ಆದರೆ ಒಬ್ಬ ಬಡವನಿಗೂ ಸಹಾಯ ಮಾಡಿಲ್ಲ. ಚಿರಂಜೀವಿ, ಖುಷ್ಬೂ ಮತ್ತು ತ್ರಿಷಾ ವಿರುದ್ಧ 20 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿರುವುದಾಗಿ ತಿಳಿಸಿದ ಮನ್ಸೂರ್, ಬಂದ ಹಣವನ್ನು ಮದ್ಯ ಸೇವನೆಯಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ನೀಡುವುದಾಗಿ ಹೇಳಿದರು. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.
చిరంజీవి పార్టీ పెట్టి కొన్ని వేల కోట్లు మింగాడు కానీ పేద వాళ్ళకి ఒక్కరికి కూడా హెల్ప్ చేయడు ఎవరిది వక్ర బుద్ధి.@KChiruTweets మీద 20 కోట్లకు పరువు నష్టం దావా వేసాను వచ్చిన డబ్బును మధ్యం తాగి చనిపోయిన కుటుంబాలకు ఇస్తాను – మన్సూర్ ఆలీ
pic.twitter.com/t7hD0BspRI— Gopi Nath NBK (@Balayya_Garu) November 28, 2023