Sunday, January 11, 2026

ಮಂಡ್ಯದಲ್ಲಿ ರಕ್ತದಾನದ ಮೂಲಕ ಮಂತ್ರಮಾಂಗಲ್ಯ: ಸ್ಯಾಂಡಲ್‌ವುಡ್‌ನಿಂದ ಶುಭ ಹಾರೈಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಂಡ್ಯ ತಾಲೂಕಿನ ಮಂಗಲದಲ್ಲಿ ರಕ್ತದಾನದ ಮೂಲಕ ಮಂತ್ರಮಾಂಗಲ್ಯ ನೆರವೇರಿದೆ. ಯಶಸ್ವಿನಿ ಎಂ. ಎಸ್. ಮತ್ತು ಸಿ. ಸೋಮಶೇಖರ್ ಹೊಸಜೀವನಕ್ಕೆ ಕಾಲಿಟ್ಟಿದ್ದಾರೆ.

ತಾಲೂಕಿನ ಮಂಗಲ ಗ್ರಾಮದ ಮಲ್ಲೇಶ್ವರಸ್ವಾಮಿ ಸಮುದಾಯ ಭವನದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಪರಿಕಲ್ಪನೆಯಂತೆ ಶ್ರೀನಾದನಂದನಾಥಸ್ವಾಮಿ, ನಟ ಚೇತನ್ ಅಹಿಂಸಾ ಹಾಗೂ ನಟಿ ಪೂಜಾ ಗಾಂಧಿ ಸೇರಿದಂತೆ ಇತರ ಗಣ್ಯರ ಸಮ್ಮುಖದಲ್ಲಿ ಮಂತ್ರ ಮಾಂಗಲ್ಯ ಮದುವೆ ಆಗುವ ಮೂಲಕ ಅರ್ಥಪೂರ್ಣ ಸಾಂಸಾರಿಕ ಹಾದಿಯನ್ನು ತುಳಿದರು.

ಈ ಕುರಿತು ನಟ ಚೇತನ್ ಅಹಿಂಸಾ ಅವರು ಮಾತನಾಡಿ, ಚಳವಳಿಯ ಭೂಮಿ ಮಂಡ್ಯದಲ್ಲಿ ಶತಮಾನದ ಕವಿ ಕುವೆಂಪು ಅವರ ಮಂತ್ರ ಮಾಂಗಲ್ಯ ಪ್ರೇರಿತವಾದ ಮದುವೆಗೆ ಬಂದಿದ್ದೇವೆ. ಈ ಮೂಲಕ ವೈಜ್ಞಾನಿಕತೆ, ಸಮಾನತೆ, ಆಡಂಬರವಿಲ್ಲದ ಸರಳ ವಿವಾಹಕ್ಕೆ ಇದೊಂದು ಮಾದರಿಯಾಗಿದೆ. ವೈಯಕ್ತಿಕವಾಗಿ ಮಾತ್ರವಲ್ಲದೇ, ವ್ಯವಸ್ಥಿತವಾಗಿಯೂ ನಾವು ಸಮ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ಕರೆ ನೀಡಿದರು.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!