CINE | ಕೊನೆಗೂ ಮದುವೆಯಾಗುವ ಹುಡುಗನ ಮುಖ ತೋರಿಸಿದ ಮಾನ್ವಿತಾ ಕಾಮತ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಸ್ಯಾಂಡಲ್‌ವುಡ್ ನಟಿ ಮಾನ್ವಿತಾ ಕಾಮತ್ ಮೇ 1ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈಗಾಗಲೇ ಮಾನ್ವಿತಾ ಮದುವೆಯ ಕಾರ್ಡ್‌ ಎಲ್ಲೆಡೆ ವೈರಲ್‌ ಆಗಿತ್ತು. ಆದರೆ ಹುಡುಗನ ಫೋಟೊವನ್ನು ಮಾನ್ವಿತಾ ಎಲ್ಲಿಯೂ ಪೋಸ್ಟ್‌ ಮಾಡಿರಲಿಲ್ಲ.

ಇದೇ ಮೊದಲ ಬಾರಿಗೆ ಮಾನ್ವಿತಾ ತಮ್ಮ ಹುಡುಗನ ಫೋಟೊ ರಿವೀಲ್‌ ಮಾಡಿದ್ದಾರೆ. ಮ್ಯೂಸಿಕ್ ಡೈರೆಕ್ಟರ್ ಅರುಣ್ ಕುಮಾರ್ ಹಾಗೂ ಮಾನ್ವಿತಾ ಅಶ್ವಿನಿ ಪುನೀತ್‌ರಾಜ್‌ಕುಮಾರ್‌ಗೆ  ಆಮಂತ್ರಣ ನೀಡಿದ್ದಾರೆ. ಈ ವೇಳೆ, ಮದುವೆಯಾಗುವ ಹುಡುಗ ಅರುಣ್ ಕುಮಾರ್ ಕೂಡ ಹಾಜರಿ ಹಾಕಿದ್ದಾರೆ. ಈ ಮೂಲಕ ನಟಿ ಹುಡುಗನ ಮುಖ ರಿವೀಲ್ ಮಾಡಿದ್ದಾರೆ.

ಮ್ಯೂಸಿಕ್ ಪ್ರೋಡ್ಯೂಸರ್ ಅರುಣ್ ಕುಮಾರ್ ಜೊತೆ ಮಾನ್ವಿತಾ ಮದುವೆ ಕೊಂಕಣಿ ಸಾಂಪ್ರದಾಯದಂತೆ ಮೇ 1ರಂದು ಚಿಕ್ಕಮಗಳೂರಿನ ಕಳಸದಲ್ಲಿ ನಡೆಯಲಿದೆ. ಮಾನ್ವಿತಾದು ಸಂಪೂರ್ಣ ಅರೇಂಜ್‌ ಮ್ಯಾರೇಜ್‌ ಆಗಿದೆ. ತಾಯಿ ತೋರಿಸಿದ ಹುಡುಗನನ್ನು ಮಾನ್ವಿತಾ ಮದುವೆಯಾಗುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!