HEALTH| ಸಕ್ಕರೆ ಬದಲಿಗೆ ಜೇನುತುಪ್ಪ ಬಳಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಾಚೀನ ಕಾಲದಿಂದಲೂ ಆಯುರ್ವೇದದಲ್ಲಿ ಜೇನುತುಪ್ಪವನ್ನು ಔಷಧವಾಗಿ ಬಳಸಲಾಗುತ್ತಿದೆ. ಜೇನುತುಪ್ಪ ನೀರು ಮತ್ತು ಸಕ್ಕರೆಯಿಂದ ಕೂಡಿದ್ದು, ಫ್ರಕ್ಟೋಸ್ ಮತ್ತು ಗ್ಲೂಕೋಸ್ ಪ್ರಮಾಣವನ್ನು ಹೊಂದಿರುತ್ತದೆ.

ವೈಲ್ಡ್ ಫ್ಲವರ್, ಟ್ಯೂಪೆಲೋ, ಗೋಲ್ಡನ್ ಬಡ್, ಯೂಕಲಿಪ್ಟಸ್, ಇತ್ಯಾದಿ ಸೇರಿದಂತೆ 300 ಕ್ಕೂ ಹೆಚ್ಚು ವಿಧದ ಜೇನುತುಪ್ಪಗಳಿವೆ. ಪ್ರತಿಯೊಂದು ವಿಧದ ಜೇನುತುಪ್ಪವು ವಿಶಿಷ್ಟವಾದ ಬಣ್ಣ ಮತ್ತು ಪರಿಮಳವನ್ನು ಹೊಂದಿರುತ್ತದೆ. ಇದು ಸಕ್ಕರೆಗಿಂತ ಆರೋಗ್ಯಕ್ಕೆ ಹಿತಕೂಡ ಹೌದು

1. ಜೇನುತುಪ್ಪವು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದ್ದು, ಸೂಕ್ಷ್ಮಜೀವಿಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ. ಸುಟ್ಟಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

2. ಕೆಮ್ಮು ಮತ್ತು ನೋಯುತ್ತಿರುವ ಗಂಟಲು ನಿವಾರಿಸಲು ಸಹಾಯ ಮಾಡುತ್ತದೆ. ದುರ್ಬಲವಾಗಿರುವ ಮಕ್ಕಳಿಗೆ ದಿನನಿತ್ಯದ ಹಾಲಿನಲ್ಲಿ ಸಕ್ಕರೆಯ ಬದಲು ಜೇನುತುಪ್ಪವನ್ನು ನೀಡಿದರೆ ಅವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ

3. ಜೇನುತುಪ್ಪವನ್ನು ಪ್ರತಿದಿನ ಸೇವಿಸಿದಾಗ ದೀರ್ಘಾವಧಿಯ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

4. ವೃದ್ಧಾಪ್ಯದಲ್ಲಿ ನಮ್ಮ ಮಾನಸಿಕ ಆರೋಗ್ಯವನ್ನು ಸದೃಢವಾಗಿಡಲು ಜೇನುತುಪ್ಪವನ್ನು ಸೇವಿಸಿ.

5. ಚೆನ್ನಾಗಿ ನಿದ್ದೆ ಮಾಡದವರಿಗೆ ಜೇನುತುಪ್ಪ ಒಳ್ಳೆಯದು. ಒಂದು ಲೋಟ ಬಿಸಿ ಹಾಲಿಗೆ 1 ಅಥವಾ 2 ಟೀ ಚಮಚ ಜೇನುತುಪ್ಪವನ್ನು ಕುಡಿದರೆ ನಿದ್ರೆಯನ್ನು ಪ್ರೇರೇಪಿಸುತ್ತದೆ.

6. ದಾಳಿಂಬೆ ಬೀಜಗಳು ಮತ್ತು ಕೆಲವು ಹಣ್ಣುಗಳನ್ನು ಜೇನುತುಪ್ಪದೊಂದಿಗೆ ಬೆರೆಸಿ ಮತ್ತು ಆಹಾರದ ಬದಲಿಗೆ ಪ್ರತಿ ರಾತ್ರಿ ಸೇವಿಸಿದರೆ ಉತ್ತಮ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುತ್ತದೆ. ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ.

7.ತ್ವಚೆಯು ಶುಷ್ಕವಾಗಿದ್ದು ಸುಂದರವಾಗಿ ಕಾಣದಿದ್ದರೆ ಕೆನೆ ತೆಗೆದ ಹಾಲಿಗೆ ಜೇನುತುಪ್ಪ ಬೆರೆಸಿ ಅದಕ್ಕೆ ಸ್ವಲ್ಪ ಕಡಲೆಹಿಟ್ಟು ಸೇರಿಸಿ ಈ ಮಿಶ್ರಣವನ್ನು ಬೇಯಿಸಿ ಫೇಶಿಯಲ್ ಮಾಡಿ ಹಚ್ಚಿದರೆ ಚರ್ಮ ಕಾಂತಿಯುತವಾಗಿ ಹೊಳೆಯುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!