Tuesday, March 21, 2023

Latest Posts

ವೈಮಾನಿಕ ಪ್ರದರ್ಶನದಲ್ಲಿ ಪ್ರದರ್ಶಿಸಲಾದ HLFT-42 “ಮಾರುತ್” ಯುದ್ಧ ವಿಮಾನದ ಮೇಲಿದ್ದ ಹನುಮಾನ್ ಚಿತ್ರ ತೆರವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಮಂಗಳವಾರ ಬೆಂಗಳೂರಿನ ಏರೋ ಇಂಡಿಯಾ 2023 ರಲ್ಲಿ ಪ್ರದರ್ಶಿಸಲಾದ ಎಚ್‌ಎಲ್‌ಎಫ್‌ಟಿ-42 ಯುದ್ಧ ವಿಮಾನದ ಮೇಲಿದ್ದ ಭಗವಾನ್ ಹನುಮಾನ್ (ಭಜರಂಗಬಲಿ) ಚಿತ್ರವನ್ನು ತೆರವುಗೊಳಿಸಿದೆ.

ಸೋಮವಾರ ಏರೋ ಇಂಡಿಯಾದಲ್ಲಿ ತನ್ನ ಹಿಂದೂಸ್ತಾನ್ ಲೀಡ್ ಇನ್ ಫೈಟರ್ ಟ್ರೈನರ್ (HLFT)-42 ರ ಸ್ಕೇಲ್ ಮಾಡೆಲ್ ಅನ್ನು ಅನಾವರಣಗೊಳಿಸಿದ್ದು, ಅದರ ರೆಕ್ಕೆಯಲ್ಲಿ ಭಗವಾನ್ ಹನುಮಂತನ ಚಿತ್ರವಿತ್ತು. ಚಿತ್ರದ ಕುರಿತಾಗಿ ಪರ-ವಿರೋಧದ ಚರ್ಚೆಗಳು ಪ್ರಾರಂಭವಾಗಿದ್ದವು, ಈ ಹಿನ್ನೆಲೆ ಈಗ ಹೆಚ್​ಎಎಲ್ ಯುದ್ಧ ​ವಿಮಾನದ ಮೇಲಿನ ಭಜರಂಗಬಲಿ ಚಿತ್ರವನ್ನು ತೆಗೆದು ಹಾಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!