ಅಬ್ಬ! ತುಳಸಿಯಲ್ಲಿ ಇಷ್ಟೆಲ್ಲಾ ಇದ್ಯಾ!

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಹೌದು…ತುಳಸೀ ಎಂಬುದು ಅದ್ಭುತ ಆರೋಗ್ಯಪೂರ್ಣ ವ್ಯವಸ್ಥೆಗೆ ಸಹಕಾರಿ. ಇದು ಧಾರ್ಮಿಕವಾಗಿಯೂ ಮಹತ್ವ ಪಡೆದ ಸಸ್ಯ. ತುಳಸಿ ಬೀಜದಲ್ಲಿ ಪ್ರೋಟೀನ್, ಕಬ್ಬಿಣ, ಪೊಟ್ಯಾಸಿಯಮ್, ಫೋಲಿಕ್ ಆಮ್ಲ, ಫೈಬರ್, ಒಮೆಗಾ ೩, ಕೊಬ್ಬಿನಾಮ್ಲಗಳು, ಫೈಟೊಕೆಮಿಕಲ್ಸ್, ಪಾಲಿಫಿನಾಲಿಕ್ ಮತ್ತು ಲುಟೀನ್ ಮುಂತಾದ ಅಂಶಗಳಿವೆ. ತುಳಸಿ ಬೀಜಗಳು ಕೂದಲನ್ನು ಆರೋಗ್ಯಕರವಾಗಿಸಲು ಸಹಾಯಮಾಡುತ್ತದೆ. ಕವಲೊಡೆಯುವ ಕೂದಲಿಗೆ ಪರಿಹಾರ ನೀಡುತ್ತದೆ.

ತಲೆಹೊಟ್ಟಿಗೆ ತುಳಸಿ ಬೀಜದಲ್ಲಿ ಪರಿಹಾರ ಸಿಗುತ್ತದೆ. ಮೃದುವಾದ ಕಾಂತಿಯುತ ಕೂದಲು ಪಡೆದುಕೊಳ್ಳಲು ಈ ತುಳಸೀ ಬೀಜ ಸಹಕಾರಿಯಾಗಿದೆ.  ಒತ್ತಡ ನಿವಾರಕ ಮತ್ತು ಉರಿಯೂತ ನಿವಾರಕ ಗುಣಗಳು ಹೇರಳವಾಗಿ ಕಂಡುಬರುತ್ತವೆ. ತಲೆನೋವು ಮತ್ತು ಒತ್ತಡವನ್ನು ನಿವಾರಿಸುವಲ್ಲಿ ಇದು ಪರಿಣಾಮಕಾರಿಯಾಗಿದೆ. ಇದಕ್ಕಾಗಿ ತುಳಸಿ ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ, ಈ ನೀರಿನಲ್ಲಿ ನಿಂಬೆ ರಸ ಮತ್ತು ಕೆಲವು ಹನಿ ಮಲ್ಲಿಗೆ ಎಣ್ಣೆಯನ್ನು ಬೆರೆಸಿ ಕೂದಲಿಗೆ ಮಸಾಜ್ ಮಾಡಿ. ಇದರಿಂದ  ಒತ್ತಡ ಕಡಿಮೆಯಾಗಿ ಮಾನಸಿಕ ಶಾಂತಿ ನೆಲೆಸುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!