ಯೋಗಿಯ ಮಡಿಲಲ್ಲಿ ಮಾರ್ಜಾಲಕ್ಕೆ ಸಿಕ್ಕಿತು ಮಲಗುವ ಯೋಗ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಈ ಹಿಂದೆ ಗೋರಖ್​ಪುರ ಪ್ರಾಣಿಸಂಗ್ರಾಹಲಯಕ್ಕೆ ಭೇಟಿ ಕೊಟ್ಟಿದ್ದಾಗ ಮುದ್ದಾದ ಎರಡು ಚಿರತೆ ಮರಿಗಳನ್ನು ತೋಳಲ್ಲಿ ಎತ್ತಿಕೊಂಡು, ಬಾಟಲಿ ಹಾಲು ಕುಡಿಸಿದ್ದರು.

ಅಲ್ಲಿಗೆ ಭೇಟಿಕೊಟ್ಟಾಗಲೆಲ್ಲ ಗೋಶಾಲೆಗೂ ಹೋಗಿ ಬರುತ್ತಾರೆ. ಅಲ್ಲಿರುವ ಗೋವುಗಳಿಗೆ ಮೇವು-ಬೆಲ್ಲ ತಿನ್ನಿಸಿ, ಮೈದವಡಿ ಮುದ್ದಾಡಿ ಬರುತ್ತಾರೆ.

ಇದೀಗ ಯೋಗಿ ಅವರು ಬೆಕ್ಕಿನೊಂದಿಗೆ ಇರುವ ಫೋಟೋವೊಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಗೋರಖ್​ಪುರ ದೇವಸ್ಥಾನದಲ್ಲಿರುವ ತಮ್ಮ ಕಚೇರಿಯಲ್ಲಿ ಕುಳಿತ ಯೋಗಿ ಆದಿತ್ಯನಾಥ್​ ಮಡಿಲಲ್ಲಿ ಬೆಕ್ಕೊಂದು ಬೆಚ್ಚಗೆ ಮಲಗಿರುವ ಫೋಟೋ. ಇಲ್ಲಿ ಯೋಗಿ ಆದಿತ್ಯನಾಥ್​ ಅವರ ಮಡಿಲೇ ತನ್ನ ಸುಪ್ಪತ್ತಿಗೆ ಎಂಬಂತೆ ಬೆಕ್ಕೊಂದು ಮಲಗಿದೆ. ಬೆಕ್ಕನ್ನು ಅವರು ತಂದು ಮಲಗಿಸಿಕೊಂಡಿದ್ದಲ್ಲ, ಯೋಗಿ ಆದಿತ್ಯನಾಥ್​ ಸೀಟ್​ ಮೇಲೆ ಕುಳಿತುಕೊಳ್ಳುತ್ತಿದ್ದಂತೆ, ಅದಾಗೇ ಬಂದು ಮಲಗಿದೆ ಎನ್ನಲಾಗಿದೆ.

ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಅವರು, ‘ತಮ್ಮ ಮಿತ್ರರು ಯಾರು, ಶತ್ರುಗಳು ಯಾರು ಎಂಬುದನ್ನು ಪ್ರಾಣಿ-ಪಕ್ಷಿಗಳೂ ಗುರುತಿಸಿಕೊಳ್ಳುತ್ತವೆ’ ಎಂದು ಬರೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!