ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಗಮನ ಸೆಳೆದ ಮಾರ್ಕೆಟಿಂಗ್ ಫೆಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಲ್ಲಿಯ ವಿದ್ಯಾನಗರದ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಸ್ಟಡಿಸ್ ಹಾಗೂ ರಿಸರ್ಚ್(ಎಸ್‌ಎಂಎಸ್‌ಆರ್) ವಿಭಾಗದಲ್ಲಿ ಸೋಮವಾರ ಎಂಬಿಎ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಮಾರ್ಕೋವಿಸ್ಟಾ ಎಂಬ ಮಾರ್ಕೆಟಿಂಗ್ ಫೆಸ್ಟ್ ಗಮನ ಸೆಳೆಯಿತು.

ಎಂಬಿಎ ವಿದ್ಯಾರ್ಥಿಗಳಿಗೆ ನಾಯಕತ್ವ, ನಾವೀನ್ಯತೆ, ಮಾರುಕಟ್ಟೆಯ ಕೌಶಲಗಳು ಹಾಗೂ ಆತ್ಮ ವಿಶ್ವಾಸ ಸದೃಢಗೊಳಿಸುವ ಉದ್ದೇಶದಿಂದ ಮಾರುಕಟ್ಟೆ ಹಬ್ಬ ಏರ್ಪಡಿಸಲಾಗಿತ್ತು.

ವಿದ್ಯಾರ್ಥಿಗಳು ಮಾರುಕಟ್ಟೆಯಲ್ಲಿ ತಮ್ಮನ್ನು ತಾವು ಹೇಗೆ ತೊಡಗಿಸಿಕೊಳ್ಳುತ್ತಾರೆ ಎಂಬ ಪ್ರಯೋಗಾರ್ಥವಾಗಿ ಕ್ರೀಯಾಚಟುವಟಿಕೆ ಆಧಾರಿತ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಉತ್ತರ ಕರ್ನಾಟಕದ ಭಾಗದ ೧೭ ಕಾಲೇಜಿನ ೧೦೦ ಕ್ಕೂ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಕೌಶಲ ಪ್ರದರ್ಶಿಸಿದರು.

ಉತ್ಪನ್ನಗಳ ಮಾರುಕಟ್ಟೆ ಪರಿಚಯ ಮಾಡಲು ಬೇಕಾದ ವಿಡಿಯೋ, ಸ್ವಾಫ್ಟವೇರ್ ಹಾಗೂ ಆಪ್‌ಗಳ ಸೃಷ್ಟಿ, ಸಂವಹನ ಕೌಶಲ ವೃದ್ಧಿಸಿಕೊಳ್ಳುವ, ಉತ್ಪನ್ನಗಳ ಹೇಗೆ ಮಾರಾಟ ಮಾಡಬೇಕು ಎಂಬ ಐದು ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದರು. ತಾವು ಮಾಡಿದ ಮಾದರಿಗಳ ಮೂಲಕ ಎಲ್ಲರ ಗಮನ ಸೆಳೆದರು.

ಬೆಳಿಗ್ಗೆ ಎಸ್‌ಬಿಐ ಜೀವ ವಿಮಾ ರಾಜ್ಯ ವಿಭಾಗಿಯ ವ್ಯವಸ್ಥಾಪಕ ಶಿವಕುಮಾರ ಮಲಕಣ್ಣವರ ಮಾಕೋವಿಸ್ಟಾಗೆ ಮಾರ್ಕೆಟಿಂಗ್ ಫೆಸ್ಟ್‌ಗೆ ಚಾಲನೆ ನೀಡಿದರು. ಬಳಿಕ ಮಾತನಾಡಿ ಅವರು, ವಿದ್ಯಾರ್ಥಿಗಳು ಮಾರುಕಟ್ಟೆಯಲ್ಲಿ ಎದುರಾಗುವ ಸವಾಲು ಹಾಗೂ ಸಮಸ್ಯೆಗಳನ್ನು ಮೆಟ್ಟಿನಿಂತಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ. ಡಿಜಿಟಲೀಕರಣಕ್ಕೆ ಹೊಂದುಕೊಂಡು ಮುಂದೆ ಸಾಗಬೇಕಾದ ಅವಶ್ಯಕತೆ ಇದೆ ಎಂದರು.
ಈ ಸಂದರ್ಭದಲ್ಲಿ ಎಸ್‌ಎಂಎಸ್‌ಆರ್ ನಿರ್ದೇಶಕ ಎಂ.ಆರ್. ಶೋಲಾಪುರ, ಪ್ರೊ. ಡಾ. ನಾಗರಾಜ ನವಲಗುಂದ, ಪ್ರೊ. ಜಿ.ಎಸ್. ಹಿರೇಮಠ, ಪ್ರೊ. ಶಶಿಧರ ಎಂ., ಸಂಜನಾ ಎಂ., ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!