ಹೊಸದಿಗಂತ ಡಿಜಿಟಲ್ ಡೆಸ್ಕ್:
ಇದೀಗ ಮದುವೆ ಮನೆಗಳಲ್ಲಿ ಮುಂಚಿನಷ್ಟು ಜನರಿಲ್ಲ, ಜನ ಸೇರುವ ಪ್ರದೇಶಗಳಿಗೆ ಹೋಗೋದಕ್ಕೆ ಎಲ್ಲರೂ ಹೆದರುತ್ತಿದ್ದಾರೆ. ಇನ್ನೂ ಹಲವರು ಫೋನ್‌ನಲ್ಲಿಯೇ ವಿಶ್ ಮಾಡುತ್ತಿದ್ದಾರೆ. ಇದೀಗ ಪಶ್ಚಿಮ ಬಂಗಾಳದ ಜೋಡಿಯೊಂದು ವರ್ಚುಯಲ್ ಆಗಿ ಮದುವೆ ಆಗಲು ನಿರ್ಧರಿಸಿದೆ.
ಕೊರೋನಾ ಸೋಂಕಿನ ಸಂಖ್ಯೆಗಳು ಹೆಚ್ಚಾಗೋ ಮುನ್ನವೇ ಮದುವೆ ದಿನಾಂಕ ಗೊತ್ತಾಗಿದ್ದು, ಅದನ್ನು ಬದಲಿಸೋದು ಕಷ್ಟ. ಒಂದು ವೇಳೆ ಬದಲಾವಣೆ ಮಾಡಿದರೂ, ಕೊರೋನಾ ಯಾವಾಗ ಮುಗಿಯುತ್ತೆ ಎಂದು ಯಾರಿಗೂ ತಿಳಿದಿಲ್ಲ.
ಸಂದೀಪನ್ ಹಾಗೂ ಅದಿತಿ ಗೂಗಲ್ ಮೀಟ್ ಮೂಲಕ ಮದುವೆಯಾಗಿ, ಝೊಮ್ಯಾಟೊ ಮೂಲಕ ಊಟ ಹಾಕಿಸೋಕೆ ರೆಡಿಯಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಸೋಂಕು ಹೆಚ್ಚಳವಾಗಿದ್ದು, ಮದುವೆಗೆ 200 ಜನಕ್ಕೆ ಮಾತ್ರ ಆಹ್ವಾನ ನೀಡಬಹುದಾಗಿದೆ. ಈ ಕಾರಣದಿಂದ ಆನ್‌ಲೈನ್ ಮದುವೆ ನಿರ್ಧಾರಕ್ಕೆ ಜೋಡಿ ಬಂದಿದೆ.
ಈಗ ಈ ಮದುವೆ ವಿಚಿತ್ರ ಅನಿಸಬಹುದು ಆದರೆ ಕೊರೋನಾ ಹೀಗೆ ಮುಂದುವರಿದರೆ, ಇದೇ ನಾರ್ಮಲ್ ಎಂದು ಕೂಡ ಅನಿಸಬಹುದು!