Thursday, February 9, 2023

Latest Posts

SHOCKING | ಈ ಕಳ್ಳರಿಗೆ ಮದುವೆ ಮನೆಯೇ ಟಾರ್ಗೆಟ್, ಮಕ್ಕಳಿಗೆ ಕಳ್ಳತನದ ಟ್ರೈನಿಂಗ್ ನೀಡ್ತಿದ್ರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರ ರಾಜಧಾನಿಯ ಮದುವೆ ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ದೊಡ್ಡ ಗ್ಯಾಂಗ್ ಒಂದನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಬಂಧನಕ್ಕೊಳಗಾದ ಕಳ್ಳರು ತಮ್ಮ ಜತೆ ಮಕ್ಕಳನ್ನು ಸೇರಿಸಿಕೊಂಡಿದ್ದು, ಇದರ ಹಿಂದೆ ಭಾರೀ ದೊಡ್ಡ ಜಾಲವೇ ಇದೆ. ಯಾವುದೇ ಥ್ರಿಲ್ಲರ್ ಸೀರೀಸ್‌ಗೆ ಕಡಿಮೆಯಿಲ್ಲ ಇವರು ಹೆಣೆಯೋ ಪ್ಲ್ಯಾನ್!

ದೆಹಲಿಯಲ್ಲಿ ಯಾವುದೇ ಅದ್ಧೂರಿ ಮದುವೆ ಇದ್ದರೂ ಇವರ ಗ್ಯಾಂಗ್ ಅಲ್ಲಿಗೆ ಹಾಜರಾಗುತ್ತಿತ್ತು. ಮಹಿಳೆಯರು, ಮಕ್ಕಳಿಗೆ ಚಂದದ ಬಟ್ಟೆ ತೊಡಿಸಿ ಸಂಬಂಧಿಕರ ರೀತಿ ಮದುವೆ ಮನೆಗೆ ಎಂಟ್ರಿ ನೀಡುತ್ತಿದ್ದರು. ನಂತರ ಹೆಚ್ಚು ಬಂಗಾರ ತೊಟ್ಟವರ ಮೇಲೆ ಕಣ್ಣಿಡುತ್ತಿದ್ದರು. ಬ್ಯಾಗ್‌ಗಳಲ್ಲಿ ಇರುವ ಆಭರಣಗಳ ಬಗ್ಗೆಯೂ ಮಾಹಿತಿ ಕಲೆ ಹಾಕಿ ಸಲೀಸಾಗಿ ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದರು.

ದೆಹಲಿಯ ಸುತ್ತ ಮುತ್ತ ಇರುವ ಬಡ ಕುಟುಂಬಗಳ ಮಕ್ಕಳನ್ನು ಟಾರ್ಗೆಟ್ ಮಾಡುವ ತಂಡ, ಮಕ್ಕಳ ಪೋಷಕರಿಗೆ ವರ್ಷಕ್ಕೆ ಹತ್ತು ಲಕ್ಷ ರೂ ಹಣ ವರ್ಗಾಯಿಸುತ್ತಿತ್ತು. ಮಕ್ಕಳಿಗೆ ಕಳ್ಳತನ ಮಾಡುವ ಬಗ್ಗೆ, ಹ್ಯೂಮನ್ ಬಿಹೇವಿಯರ್ ಬಗ್ಗೆ ಪಾಠ ಮಾಡಿ, ಟ್ರೇನಿಂಗ್ ನೀಡಲಾಗುತ್ತಿತ್ತು.

ಮದುವೆ ಮನೆಗಳಲ್ಲಿ ಆಭರಣ ಕಳೆದುಕೊಂಡವರು ದೂರು ನೀಡಿದ್ದು, ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಹಾಗೂ ನಾಲ್ವರು ಮಕ್ಕಳನ್ನು ಪೊಲೀಸರು ಬಂಧಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!