ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದ್ಯ ಪರಿಣಿತಿ ಚೋಪ್ರಾ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಡೇಟಿಂಗ್‌ನಲ್ಲಿದ್ದಾರೆ ಎನ್ನೋದು ಹಾಟ್ ಟಾಪಿಕ್ ಆಗಿದೆ.
ಈ ಬಗ್ಗೆ ಪರಿಣಿತಿ ಚೋಪ್ರಾ ಮಾತ್ರ ಬಾಯ್ಬಿಟ್ಟಿಲ್ಲ ಆದರೆ ರಾಘವ್‌ಗೆ ಈ ಪ್ರಶ್ನೆಯಿಂದ ತಪ್ಪಿಸಿಕೊಳ್ಳೋಕೆ ಆಗಿಲ್ಲ. ರಾಘವ್‌ಗೆ ಈ ಪ್ರಶ್ನೆ ಎದುರಾಗಿದ್ದು, ರಾಜಕೀಯಕ್ಕೆ ಸಂಬಂಧಿಸಿದ ವಿಚಾರ ಮಾತನಾಡಿ, ಪರಿಣಿತಿ ಬಗ್ಗೆ ಅಲ್ಲ, ಮದುವೆ ಆಗುವಾಗ ಹೇಳ್ತೀನಿ, ಎಂದು ನಕ್ಕು ಗೋಡೆ ಮೇಲೆ ದೀಪ ಇಟ್ಟಂಥ ಉತ್ತರ ನೀಡಿದ್ದಾರೆ.
ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಪರಿಣೀತಿ ಹಾಗೂ ರಾಘವ್ ಕ್ಲಾಸ್‌ಮೇಟ್ಸ್ ಆಗಿದ್ದರು. ಹಾಗಾಗಿ ಇಬ್ಬರೂ ಒಳ್ಳೆಯ ಸ್ನೇಹಿತರು ಎಂದು ಹೇಳಲಾಗಿದೆ.