ಮಾರ್ಸ್ ಎಕ್ಸ್‌ಪ್ರೆಸ್ ಸೆರೆಹಿಡಿದ ಮಂಗಳನ ಕಣ್ಣು…!

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಯುರೋಪಿಯನ್‌ ಸ್ಪೇಸ್‌ ಏಜೆನ್ಸಿ ಇತ್ತೀಚೆಗೆ ಬಿಡುಗಡೆ ಮಾಡಿರುವ ಮಂಗಳ ಗ್ರಹದ ಚಿತ್ರಗಳು ಕುತೂಹಲಕಾರಿಯಾಗಿದೆ. ಮಂಗಳನ ಮೇಲ್ಮೈಯಲ್ಲಿ ರಚನೆಯಾಗಿರುವ ಬೃಹತ್‌ ಗಾತ್ರದ ಕಣ್ಣೊಂದನ್ನು ಮಾರ್ಸ್‌ ಎಕ್ಸ್‌ ಪ್ರೆಸ್‌ ಸೆರೆ ಹಿಡಿದಿದೆ. ಈ ಚಿತ್ರಗಳು ವಿಜ್ಞಾನಿಗಳು ಹುಬ್ಬೇರಿಸುವಂತೆ ಮಾಡಿವೆ.

ಮಂಗಳ ಗೃಹಕ್ಕೆ ಕಣ್ಣಿದೆಯಾ? ಎಂದೆಲ್ಲ ನೀವು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಇದು ಕಣ್ಣಿನಂತೆ ಹೋಲುವ ರಚನೆಯಷ್ಟೇ, 1960 ರಲ್ಲಿ ಜೆಮಿನಿ ಗಗನಯಾತ್ರಿಗಳು ಮೊದಲಬಾರಿಗೆ ಸಹಾರಾ ಮರುಭೂಮಿಯಲ್ಲಿರುವ ಕಣ್ಣಿನಂತಹ ಭೂ ಮೇಲ್ಮೈ ರಚನೆಯನ್ನು ಸೆರೆಹಿಡಿದಿದ್ದರು. ಇಲ್ಲಿಯವರೆಗೂ ಇದೊಂದು ವಿಸ್ಮಯಕಾರಿ ಅಂಶವಾಗೇ ಇದೆ. ಈಗ ಮಂಗಳ ಗ್ರಹದಲ್ಲಿಯೂ ಇದೇ ರೀತಿಯ ರಚನೆ ಹೋಲುವ ಮಂಗಳನ ಕಣ್ಣಿನ ಚಿತ್ರಗಳನ್ನು ಸೆರೆ ಹಿಡಿಯಲಾಗಿದೆ.

ಮಂಗಳ ಗ್ರಹದ ದಕ್ಷಿಣ ಭಾಗದಲ್ಲಿರುವ ಅಯೋನಿಯಾ ಟೆರ್ರಾ ಎಂದು ಕರೆಯಲ್ಪಡುವ ಎತ್ತರದ ಪ್ರದೇಶದಲ್ಲಿ ಈ ರಚನೆ ಕಂಡು ಬಂದಿದೆ. ಸುಮಾರು 30 ಕಿಮಿ ಅಗಲದ ಈ ರಚನೆಯು ಮಾನವನ ಕಣ್ಣನ್ನು ಹೋಲುವಂತೆ ಮಧ್ಯಭಾಗದಲ್ಲಿ ಕಪ್ಪಾದ ರಚನೆಯಿದೆ.

ಸುಮಾರು 3.54 ಶತಕೋಟಿ ವರ್ಷಗಳ ಹಿಂದೆ ಮಂಗಳ ಗ್ರಹದ ಮೇಲ್ಮೈಯಲ್ಲಿ ನೀರಿನ ಚಲನೆಯಿಂದ ಇಂತಹ ರಚನೆಗಳಾಗಿರಬಹುದು ಅಥವಾ ಲಾವಾರಸದಿಂದಲೂ ಇಂತಹ ರಚನೆಗಳಾಗಿರಬಹುದು ಎಂದು ಖಗೋಳ ಶಾಸ್ತ್ರಜ್ಞರು ಊಹಿಸಿದ್ದಾರೆ. ಅಲ್ಲದೇ ಅಕ್ಕಪಕ್ಕದಲ್ಲಿ ಪುಟ್ಟ ಗೋಪುರದಂತಹ ರಚನೆಯೂ ಕೂಡ ಗೋಚರಿತವಾಗಿದೆ. ನೀರು, ಗಾಳಿ ಅಥವಾ ಮಂಜುಗಡ್ಡೆಯಿಂದ ಮಂಗಳನ ನೆಲವು ಕ್ರಮೇಣವಾಗಿ ಸವೆದುಹೋದಾಗ ಇವು ರಚನೆಯಾಗಿರುವ ಸಾಧ್ಯತೆಗಳಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!