ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರಂಭಿಕರಾದ ಮಿಚೆಲ್ ಮಾರ್ಷ್, ಐಡೆನ್ ಮಾರ್ಕ್ರಮ್ ಅಬ್ಬರದ ಬ್ಯಾಟಿಂಗ್ ನಡೆಸಿ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 238 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಆರಂಭಿಕರಾದ ಮಿಚೆಲ್ ಮಾರ್ಷ್, ಐಡೆನ್ ಮಾರ್ಕ್ರಮ್ ಅಬ್ಬರಿಸಿ ಉತ್ತಮ ಆರಂಭ ಒದಗಿಸಿದರೆ, ಕೊನೆಯಲ್ಲಿ ಪೂರನ್ ಸ್ಫೋಟಕ ಬ್ಯಾಟಿಂಗ್ ಬೃಹತ್ ಮೊತ್ತಕ್ಕೆ ಕಾರಣರಾದರು.
ಮಾರ್ಷ್-ಮಾರ್ಕ್ರಮ್ ಜೋಡಿ, ಮೊದಲ ವಿಕೆಟ್ ಜೊತೆಯಾಟದಲ್ಲೇ 10.2 ಓವರ್ಗಳ ಆಟವಾಡಿ 99 ರನ್ ಸೇರಿಸಿದರು. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಮಾರ್ಕ್ರಮ್ ಇಂದು 28 ಎಸೆತಗಳಲ್ಲಿ ಬೌಂಡರಿ, 2 ಸಿಕ್ಸರ್ ಸಹಿತ 47 ರನ್ಗಳಿಸಿ ಹರ್ಷಿತ್ ರಾಣಾ ಬೌಲಿಂಗ್ನಲ್ಲಿ ಬೌಲ್ಡ್ ಆದರು.
ವಿಕೆಟ್ ಕಳೆದುಕೊಂಡರೂ ಲಕ್ನೋ ಬ್ಯಾಟರ್ಗಳ ಅಬ್ಬರ ನಿಲ್ಲಲಿಲ್ಲ. ಮಿಚೆಲ್ ಮಾರ್ಷ್ ಹಾಗೂ ಪೂರನ್ 2ನೇ ವಿಕೆಟ್ ಜೊತೆಯಾಟದಲ್ಲಿ ಕೇವಲ 30 ಎಸೆತಗಳಲ್ಲಿ 71 ರನ್ ಸೇರಿಸಿದರು. ಮಾರ್ಷ್ 48 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್ಗಳ ನೆರವಿನಿಂದ 81 ರನ್ಗಳಿಸಿ ಔಟ್ ಆದರು.
ನಂತರಕೊನೆಯವರೆಗೂ ಅಬ್ಬರಿಸಿದ ಪೂರನ್ 36 ಎಸೆತಗಳಲ್ಲಿ 7 ಬೌಂಡರಿ, 8 ಸಿಕ್ಸರ್ಗಳ ಸಹಿತ ಅಜೇಯ 86 ರನ್ಗಳಿಸಿದರು.