ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಕ್ನೋ ಸೂಪರ್ ಜೈಂಟ್ಸ್ ಮಿಚೆಲ್ ಮಾರ್ಶ್ (72 ರನ್) ಮತ್ತು ನಿಕೋಲಸ್ ಪೂರನ್ (75 ರನ್) ಅವರ ಅರ್ಧಶತಕಗಳ ನೆರವಿನಿಂದ ಡೆಲ್ಲಿ ವಿರುದ್ಧ 209 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಪಡೆಯುವ ಅವಕಾಶ ಪಡೆದ ಲಕ್ನೋ ಸೂಪರ್ ಜೈಂಟ್ಸ್ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿತು. ಮೊದಲ ವಿಕೆಟ್ ಗೆ 46 ರನ್ ಗಳಿಸಿತು. ಈ ಹಂತದಲ್ಲಿ ಮರ್ಕ್ರಾಮ್ 15 ರನ್ ಗಳಿಸಿ ಔಟಾದರು.
ಬಳಿಕ ಕ್ರೀಸ್ ಗೆ ಬಂದ ನಿಕೋಲಸ್ ಪೂರನ್ ಮೆಚೆಲ್ ಮಾರ್ಶ್ ಜೊತೆಗೂ 2ನೇ ವಿಕೆಟ್ ಗೆ ಈ ಜೋಡಿ 87 ರನ್ ಗಳ ಅಮೋಘ ಜೊತೆಯಾಟವಾಡಿದರು. 36 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 6 ಬೌಂಡರಿ ನೆರವಿನಿಂದ ಮಾರ್ಶ್ 72 ರನ್ ಗಳಿಸಿ ಔಟಾದರು.
ಇನ್ನು ಮಾರ್ಶ್ ಔಟಾದ ಬಳಿಕ ಕ್ರೀಸ್ ಗೆ ಬಂದ ಎಲ್ ಎಸ್ ಜಿ ನಾಯಕ ರಿಷಬ್ ಪಂತ್ ಖಾತೆ ತೆರೆಯುವ ಮುನ್ನವೇ ಅಭಿಮಾನಿಗಳಿಗೆ ತೀವ್ರ ನಿರಾಶೆ ಮೂಡಿಸಿದರು. 6 ಎಸೆತ ಎದುರಿಸಿದ ಪಂತ್ ಶೂನ್ಯ ಸುತ್ತಿ ಕುಲದೀಪ್ ಯಾದವ್ ಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಪೂರನ್ 30 ಎಸೆತಗಳಲ್ಲಿ 75 ರನ್ ಗಳಿಸಿ ಔಟಾದರು. ಬಳಿಕ ಬಂದ ಬ್ಯಾಟ್ಸ್ ಮ್ಯಾನ್ ಗಳು ಹೆಚ್ಚು ಹೊತ್ತು ಕ್ರಿಸ್ ನಲ್ಲಿ ನಿಲ್ಲಲಿಲ್ಲ. ಅಂತಿಮವಾಗಿ ಲಕ್ನೋ ಸೂಪರ್ ಜೈಂಟ್ಸ್ ಒಟ್ಟು 209 ರನ್ ಕಲೆಹಾಕಿತು.