ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾರ್ಟಿನ್ ಚಿತ್ರದ ಕುರಿತು ರಿವ್ಯೂ ಮಾಡಿ ಧ್ರುವ ಸರ್ಜಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ರೀಲ್ಸ್ ಸ್ಟಾರ್ ನಟ ಸುಧಾಕರ್ ಗೌಡ ಕೊನೆಗೂ ಕ್ಷಮೆ ಯಾಚಿಸಿದ್ದಾರೆ.
ಇನ್ ಸ್ಟಾಗ್ರಾಂ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ ಸುಧಾಕರ್ ಗೌಡ. ‘ನಾನು ಯಾರ ವಿರೋಧವೋ ಅಥವಾ ಪರವೂ ಅಲ್ಲ. ನಾನು ಮಾಡಿದ್ದ ಒಂದು ರೀವ್ಯೂ ಈ ಮಟ್ಟಿಗೆ ವೈರಲ್ ಆಗುತ್ತದೆ ಎಂದು ನಾನು ಭಾವಿಸಿರಲಿಲ್ಲ. ಚಿತ್ರದ ಬಗ್ಗೆ ಮಾತ್ರ ನಾನು ಮಾತನಾಡಿದ್ದೆನೇ ಹೊರತು ಧ್ರುವ ಸರ್ಜಾ ಅವರ ಬಗ್ಗೆ ನಾನು ಮಾತನಾಡಿಲ್ಲ.ಧ್ರುವ ಸರ್ಜಾ ಅವರ ಕರ್ನಾಟಕ ಮಾಸ್ ಕಟೌಟ್.. ಅಂತಹ ದೊಡ್ಡ ನಟನಿಗೆ ಅಷ್ಟು ದೊಡ್ಡ ಮೊತ್ತದ ಖರ್ಚು ಮಾಡಿಯೂ ಉತ್ತಮ ಚಿತ್ರ ಸಿಗಲಿಲ್ಲ ಎಂಬ ಆಕ್ರೋಶದಿಂದ ನಾನು ಆ ವಿಮರ್ಶೆ ಮಾಡಿದ್ದೆ ಎಂದು ಹೇಳಿದ್ದಾರೆ.
ನಾನು ಮಾರ್ಟಿನ್ ಚಿತ್ರಕ್ಕೆ ನೆಗೆಟಿವ್ ರೀವ್ಯೂ ಮಾಡಬೇಕು ಎಂಬ ಕೆಟ್ಟ ಉದ್ದೇಶದಿಂದ ನಾನು ಆ ವಿಡಿಯೋ ಮಾಡಿರಲಿಲ್ಲ. ನಾನೂ ಕೂಡ ಧ್ರುವ ಸರ್ಜಾ ಅವರ ಚಿತ್ರಗಳನ್ನು ನೋಡಿದ್ದೇನೆ. ಅವರ ಬಹುದ್ದೂರ್ ಚಿತ್ರಕ್ಕಾಗಿ ಥಿಯೇಟರ್ ಮುಂದೆ ಕಾದು ನೋಡಿ ಬಳಿಕ ಆ ಚಿತ್ರದಿಂದ ಇಂಪ್ರೆಸ್ ಆಗಿ ನನ್ನ ಫೇಸ್ ಬುಕ್ ಪ್ರೊಫೈಲ್ ಅನ್ನು ಬಹದ್ದೂರ್ ಸುಧಾಕರ್ ಎಂದು ಬದಲಿಸಿಕೊಂಡಿದ್ದೆ. ಧ್ರುವ ಸರ್ಜಾ ಅವರನ್ನು ಕಂಡರೆ ನನಗೆ ಆ ಮಟ್ಟಿಗೆ ಅಭಿಮಾನ ಇದೆ. ಅದ್ಧೂರಿ ಚಿತ್ರ ಡೈಲಾಗ್ ಗಳನ್ನು ಈಗಲೂ ನಾನು ಮರೆತಿಲ್ಲ. ಅಂತಹ ಚಿತ್ರಗಳನ್ನು ಮಾಡಿದ್ದ ಧ್ರುವ ಸರ್ಜಾ ಅವರಿಗೆ ಈಗ ಇಂತಹ ಚಿತ್ರ ಬಂತು ಎಂಬ ಕಾರಣಕ್ಕೆ ಆ ವಿಡಿಯೋ ಮಾಡಿದ್ದೆ. ಆದರೆ ಬಳಿಕ ಆ ವಿಡಿಯೋ ಡಿಲೀಟ್ ಮಾಡಿದ್ದೆ. ಆದರೂ ಅಷ್ಟು ಹೊತ್ತಿಗಾಗಲೇ ಅದು ವೈರಲ್ ಆಗಿತ್ತು.
ಬಳಿಕ ಆ ಕಡೆಯಿಂದಲೂ ಕರೆಗಳು ಮೆಸೇಜ್ ಗಳು, ಅಶ್ಲೀಲ ನಿಂದನೆಗಳು ಬರಲಾರಂಭಿಸಿತು. ಅದರಿಂದ ನಾನು ಕೂಡ ಸ್ವಲ್ಪ ಡಿಸ್ಟರ್ಬ್ ಆಗಿ ಮತ್ತೊಂದು ವಿಡಿಯೋ ಮಾಡಿದ್ದೆ. ಆದರೂ ನನಗೆ ತಿಳಿಯದೇ ನನ್ನ ಕಡೆಯಿಂದ ತಪ್ಪಾಗಿದ್ದು, ಧ್ರುವ ಸರ್ಜಾ ಅವರಿಗೆ ಮತ್ತು ಅವರ ಅಭಿಮಾನಿಗಳಿಗೆ ನಾನು ಮೂಲಕ ಕ್ಷಮೆ ಕೇಳುತ್ತೇನೆ.ಅಂತೆಯೇ ನನ್ನ ಕಡೆಯಿಂದ ನಾನು ಇದನ್ನು ಮುಂದುವರೆಸಲ್ಲ. ಒಂದು ವೇಳೆ ನೀವು ಮುಂದುವರೆಸಿದರೂ ನಾನು ಆ ಬಗ್ಗೆ ಗಮನ ಹರಿಸಲ್ಲ. ನನ್ನ ಗುರಿಗಳು ಬೇರೆ ಇವೆ, ಆ ಬಗ್ಗೆ ನನ್ನ ಗಮನ ಹರಿಸುತ್ತೇನೆ ಎಂದು ಸುಧಾಕರ್ ಹೇಳಿದ್ದಾರೆ.