ಹೊಸದಿಗಂತ ಡಿಜಿಟಲ್ ಡೆಸ್ಕ್:
ಹುತಾತ್ಮ ಯೋಧ, ಹೆಮ್ಮೆಯ ಕನ್ನಡಿಗ, ವೀರ ಯೋಧ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರಿಗೆ ಮರಣೋತ್ತರವಾಗಿ ಶೌರ್ಯಚಕ್ರ ಪ್ರಶಸ್ತಿಯ ಗೌರವ ದೊರೆತಿದೆ.
ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಕಳೆದ ನವೆಂಬರ್‌ನಲ್ಲಿ ಭಯೋತ್ಪಾದಕರ ಗುಂಡೇಟಿನಿಂದ ಹುತಾತ್ಮರಾಗಿದ್ದ ಪ್ರಾಂಜಲ್ ಅವರ ಕರ್ತವ್ಯನಿಷ್ಠೆ, ಸಮರ್ಪಣಾ ಭಾವವನ್ನು ದೇಶ ಸ್ಮರಿಸಿದೆ.
ಈ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದು, ಇಂದು ಶೌರ್ಯಚಕ್ರ ದೊರೆತಿರುವುದು ಹೆಮ್ಮೆಯ ಸಂಗತಿ ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಕಳೆದ ನವೆಂಬರ್‌ನಲ್ಲಿ ದೇಶಕ್ಕಾಗಿ ಹೋರಾಡಿ ಭಯೋತ್ಪಾದಕರ ಗುಂಡೇಟಿಗೆ ಹುತಾತ್ಮರಾಗಿದ್ದ ಹೆಮ್ಮೆಯ ಕನ್ನಡಿಗ, ವೀರ ಯೋಧ ಕ್ಯಾಪ್ಟನ್ ಶ್ರೀ ಎಂ. ವಿ. ಪ್ರಾಂಜಲ್ ಅವರಿಗೆ ಮರಣೋತ್ತರವಾಗಿ “ಶೌರ್ಯ ಚಕ್ರ” ಪ್ರಶಸ್ತಿಯ ಗೌರವ ದೊರೆತಿರುವುದು ಹೆಮ್ಮೆಯ ಸಂಗತಿ.
ದೇಶದ ರಕ್ಷಣೆಯಲ್ಲಿ ಅವರ ಸಾಹಸ, ತ್ಯಾಗ,… pic.twitter.com/sSlqpx3SdP
— R. Ashoka (ಆರ್. ಅಶೋಕ) (@RAshokaBJP) January 26, 2024