ಹೊಸದಿಗಂತ ವರದಿ,ಕಾರವಾರ:
ತಾಲೂಕಿನ ಶಿರವಾಡ ಮಾರುತಿ ನಾಯ್ಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ಮೂವರನ್ನು ಅಮಾನತು ಮಾಡಲಾಗಿದೆ.
ಕಾರವಾರ ಸಿ.ಪಿ.ಐ ಕೆ. ಕುಸುಮಾಧರ , ಪಿ.ಎಸ್. ಐ ಶಾಂತಿನಾಥ ಮತ್ತು ಸಿಬ್ಬಂದಿ ದೇವರಾಜ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ.
ಮಾರುತಿ ನಾಯ್ಕ ಅವರು ಆತ್ಮಹತ್ಯೆಗೆ ಮೊದಲು ಬರೆದ ಡೆತ್ ನೋಟ್ ಮತ್ತು ಚಿತ್ರಿಸಿದ ವಿಡಿಯೋ ದಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಕಿರುಕುಳ ಎದುರಿಸಿದ ಕುರಿತು ಹೇಳಿಕೊಂಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ ಎಂದು ತಿಳಿದು ಬಂದಿದೆ.