ರುಚಿಕರವಾದ ‘ಮಸಾಲಾ ಓಟ್ಸ್’ ಹೀಗೆ ತಯಾರಿಸಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಪದಾರ್ಥಗಳು:
ಓಟ್ಸ್:1 ಕಪ್,
ಈರುಳ್ಳಿ: ½ ಕಪ್,
ಬೀನ್ಸ್: ¼ ಕಪ್,
ಕ್ಯಾರೆಟ್: 1/2 ಕಪ್
ಟೊಮೆಟೊ : ½ ಕಪ್,
ಬೆಳ್ಳುಳ್ಳಿ: 1ಚಮಚ,
ಕೊತ್ತಂಬರಿ ಪುಡಿ: ಕಾಲು ಚಮಚ,
ಜೀರಿಗೆ ಪುಡಿ: ¼ ಟೀಸ್ಪೂನ್.
ಕೊತ್ತಂಬರಿ ಸೊಪ್ಪು: ಸ್ವಲ್ಪ,
ನಿಂಬೆ ರಸ: ಎರಡು ಚಮಚ,
ಉಪ್ಪು: ಸಾಕಷ್ಟು,
ಎಣ್ಣೆ: ಸ್ವಲ್ಪ, ಅರಿಶಿನ: ಚಿಟಿಕೆ.

ಮಾಡುವ ವಿಧಾನ: 

ಒಲೆಯ ಮೇಲೆ ಪ್ಯಾನ್ ಹಾಕಿ ಎಣ್ಣೆ ಸುರಿಯಿರಿ. ಅದು ಬಿಸಿಯಾದ ನಂತರ ಹೆಚ್ಚಿದ ಈರುಳ್ಳಿ  ಮತ್ತು ಉಪ್ಪು ಸೇರಿಸಿ ಫ್ರೈ ಮಾಡಿ. ನಂತರ ಬೆಳ್ಳುಳ್ಳಿ, ಟೊಮೆಟೊ, ಬೀನ್ಸ್ ಮತ್ತು ಕ್ಯಾರೆಟ್ ತುಂಡುಗಳನ್ನು ಹಾಕಿ ಸ್ವಲ್ಪ ಫ್ರೈ ಮಾಡಿ. ಜೀರಿಗೆ ಪುಡಿ, ಧನಿಯಾ ಪುಡಿ ಮತ್ತು ಅರಿಶಿನ ಸೇರಿಸಿ ಮಿಶ್ರಣ ಮಾಡಿ. ಸ್ವಲ್ಪ ಹುರಿದ ನಂತರ, ಅಗತ್ಯವಿರುವಷ್ಟು ನೀರು ಸೇರಿಸಿ ತರಕಾರಿಯನ್ನು ಬೇಯಿಸಿ. ನಂತರ ಓಟ್ಸ್ ಸೇರಿಸಿ ಸ್ವಲ್ಪ ಕುದಿಸಿ, ಕೊತ್ತಂಬರಿ ಸೊಪ್ಪು, ನಿಂಬೆ ರಸವನ್ನು ಹಾಕಿದರೆ ರುಚಿಕರವಾದ ಮಸಾಲೆ ಓಟ್ಸ್ ರೆಡಿ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!