ಜೈಶ್ ಭಯೋತ್ಪಾದಕ ಸಂಘಟನೆಯ ಮಸೂದ್ ಅಜರ್ ಫ್ಯಾಮಿಲಿ ಸರ್ವನಾಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಭಾರತ ನಡೆಸಿದ ದಾಳಿಯಲ್ಲಿ ಜೈಶ್ ಭಯೋತ್ಪಾದಕ ಮಸೂದ್ ಅಜರ್ ಕುಟುಂಬದ ಹತ್ತು ಸದಸ್ಯರು ಮೃತಪಟ್ಟಿದ್ದಾರ ಎಂದು ಮೂಲಗಳು ತಿಳಿಸಿವೆ.

ಮೃತರಲ್ಲಿ ಮಸೂದ್ ಅಜರ್ ಸಹೋದರಿ ಮತ್ತು ಭಾವ ಸೇರಿದ್ದಾರೆ. ಬಹಾವಲ್ಪುರ್ ಗುರಿಯಾಗಿಸಿಕೊಂಡು ಭಾರತ ನಡೆಸಿದ ದಾಳಿಯಲ್ಲಿ ಹತ್ತು ಜನರು ಹತ್ಯೆಯಾಗಿದ್ದಾರೆ. ಈ ಬಗ್ಗೆ ಪಾಕಿಸ್ತಾನದ ಪತ್ರಿಕೆ ಡೇಲಿ ಉರ್ದು ವಿಸ್ತಾರವಾದ ವರದಿ ಪ್ರಕಟ ಮಾಡಿದೆ. ಸ್ಥಳೀಯ ಮೂಲಗಳ ಪ್ರಕಾರ, ಘಟನೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. ಘಟನೆಯ ನಂತರ ಪ್ರದೇಶದಲ್ಲಿ ಬಿಗಿ ಭದ್ರತೆಯನ್ನು ವಿಧಿಸಲಾಗಿದೆ, ಆದರೆ ಇನ್ನೂ ಯಾವುದೇ ಅಧಿಕೃತ ದೃಢೀಕರಣ ಅಥವಾ ನಿರಾಕರಣೆ ಬಂದಿಲ್ಲ.

ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ ಘಟನೆಗೆ ಪ್ರತಿಕ್ರಿಯೆಯಾಗಿ ಬುಧವಾರ ಭಾರತೀಯ ಸಶಸ್ತ್ರ ಪಡೆಗಳು “ಆಪರೇಷನ್ ಸಿಂದೂರ್” ಅನ್ನು ಪ್ರಾರಂಭಿಸಿದವು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ಎರಡರಲ್ಲೂ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಈ ಕಾರ್ಯಾಚರಣೆ ಗಮನಹರಿಸಿತು.

ಮಸೂದ್ ಅಜರ್ ಕುಟುಂಬವು ಜಿಹಾದ್‌ನಲ್ಲಿ ಭಾಗಿಯಾಗಿದೆ. ಅವನ ಸಹೋದರರಾದ ಅಬ್ದುಲ್ ರೌಫ್, ತಲ್ಹಾ ಅಲ್-ಸೈಫ್ ಮತ್ತು ಇತರ ನಿಕಟ ಸಂಬಂಧಿಗಳು ಸಹ ವಿವಿಧ ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!