ʼಪಿಕ್ಚರ್‌ ಅಭಿ ಬಾಕಿ ಹೇʼ ಕುತೂಹಲ ಹುಟ್ಟಿಸಿದೆ ಮಾಜಿ ಸೇನಾ ಮುಖ್ಯಸ್ಥ ಮನೋಜ್ ನರವನೆ ಮಾತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಉಗ್ರ ತಾಣಗಳ ಮೇಲೆ ಭಾರತ ದಾಳಿ ಮಾಡಿ 70ಕ್ಕೂ ಹೆಚ್ಚು ಉಗ್ರರನ್ನು ಕೊಂದು ಹಾಕಿದೆ. ಪಾಕಿಸ್ತಾನ ಕೂಡ ತಾನು ಭಾರತೀಯ ಜೆಟ್​​​ಗಳನ್ನು ಹೊಡೆದುರುಳಿಸಿ, ಕೆಲ ಭಾರತೀಯ ಸೈನಿಕರನ್ನು ಸೆರೆಹಿಡಿದಿರುವುದಾಗಿ ಹೇಳಿಕೊಂಡಿದೆ.

ಈ ಮಧ್ಯೆ ಮಾಜಿ ಸೇನಾ ಮುಖ್ಯಸ್ಥ ಮನೋಜ್ ನರವನೆ ಪಿಕ್ಚರ್‌ ಅಭಿ ಬಾಕಿ ಹೇ ಎನ್ನುವ ಮಾತನ್ನು ಹೇಳಿದ್ದು, ಎಲ್ಲರಲ್ಲೂ ಅತೀವ ಕುತೂಹಲ ಹುಟ್ಟಿದೆ. ಭಾರತದ ಕಡೆಯಿಂದ ಮತ್ತೊಂದು ದಾಳಿ ಆಗಲಿದ್ಯಾ ಎನ್ನುವ ಅನುಮಾನ ಕಾಡಿದೆ.

ಜನರಲ್ ಮನೋಜ್ ನರವಣೆ ಅವರು ‘ಅಭಿ ಪಿಕ್ಚರ್ ಬಾಕಿ ಹೈ’ ಎಂದು ಒನ್​​ಲೈನರ್ ಅನ್ನು ಪೋಸ್ಟ್ ಮಾಡಿದ್ದಾರೆ. ಇದು ಬಿಟ್ಟು ಬೇರೇನೂ ಬರೆದಿಲ್ಲ. ಭಾರತದ ಮಿಲಿಟರಿಯಿಂದ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆದ ಬಳಿಕ ಈ ಪೋಸ್ಟ್ ಬಂದಿದೆ. ಭಾರತೀಯ ಸೇನೆ ಇನ್ನೂ ದೊಡ್ಡ ದಾಳಿ ಮಾಡುವ ಸಾಧ್ಯತೆ ಇದೆ ಎಂಬುದು ಅವರ ಈ ನಿಗೂಢ ಪೋಸ್ಟ್​​​ನ ಅರ್ಥವಿರಬಹುದೇ ಎಂದು ಎಲ್ಲರೂ ಕಾಯುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!