ಚೆನ್ನೈನ ಪಬ್​ನಲ್ಲಿ ಭಾರೀ ಅನಾಹುತ: ಮೇಲ್ಛಾವಣಿ ಕುಸಿತ, ಮೂವರು ದಾರುಣ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೆನ್ನೈನ ಅಲ್ವಾರ್‌ಪೇಟ್​​ನಲ್ಲಿ ಪಬ್​ವೊಂದರ ನವೀಕರಣ ಕಾಮಗಾರಿ ವೇಳೆ ಮೊದಲ ಮಹಡಿಯ ಕಾಂಕ್ರೀಟ್ ಮೇಲ್ಛಾವಣಿ ಕುಸಿದು ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಮ್ಯಾಕ್ಸ್ (22)​, ಲಾಲಿ (24) ಹಾಗೂ ಸೈಕ್ಲೋನ್ ರಾಜ್ (48) ಘಟನೆಯಲ್ಲಿ ಮೃತಪಟ್ಟವರು. ಚೆನ್ನೈನ ಅಲ್ವಾರ್‌ಪೇಟ್ ಪ್ರದೇಶದ ಚೇಮಿಯರ್ಸ್ ರಸ್ತೆಯಲ್ಲಿರುವ ಸೆಖ್‌ಮೆಟ್ ಕ್ಲಬ್‌ನಲ್ಲಿ ಈ ಘಟನೆ ನಡೆದಿದೆ. ಮೃತ ಮೂವರು ಕ್ಲಬ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಎಂದು ಗುರುತಿಸಲಾಗಿದೆ.

ಕಾರ್ಮಿಕರಲ್ಲಿ ಇಬ್ಬರು ಮಣಿಪುರದವರು ಮತ್ತು ಇನ್ನೊಬ್ಬರು ಚೆನ್ನೈ ಮೂಲದವರು. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹವನ್ನು ಹೊರತೆಗೆದು ರಾಯಪೆಟ್ಟಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!