September 29, 2026
Tuesday, September 29, 2026
spot_img

ಪಾಕಿಸ್ತಾನದ ಕರಾಚಿಯಲ್ಲಿ ಭೀಕರ ಸ್ಫೋಟ: ಮಕ್ಕಳು ಸೇರಿ 16 ಮಂದಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ಕರಾಚಿಯ ವಸತಿ ಕಟ್ಟಡವೊಂದರಲ್ಲಿ ಅನಿಲ ಸೋರಿಕೆಯಿಂದಾಗಿ ಭಾರೀ ಸ್ಫೋಟಸಂಭವಿಸಿದ್ದು, ಮಕ್ಕಳು ಸೇರಿ 16 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 14 ಮಂದಿ ಗಾಯಗೊಂಡಿದ್ದಾರೆ.

ಓಲ್ಡ್ ಸೋಲ್ಜರ್ ಬಜಾರ್ ಪ್ರದೇಶದ ಕಟ್ಟಡದ ಮೊದಲ ಮಹಡಿಯಲ್ಲಿ ಸ್ಫೋಟ ಸಂಭವಿಸಿದ್ದು, ಪ್ರಾಥಮಿಕ ತನಿಖೆಯ ಪ್ರಕಾರ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ಸ್ಫೋಟದ ಸ್ಥಳದಿಂದ ಇದುವರೆಗೆ 14 ಶವಗಳನ್ನು ಆಸ್ಪತ್ರೆಗಳಿಗೆ ತರಲಾಗಿದೆ ಎಂದು ದೃಢಪಡಿಸಿದ್ದಾರೆ, ಆದರೆ 14 ಗಾಯಾಳುಗಳು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.

ಸ್ಫೋಟದ ಪರಿಣಾಮವಾಗಿ ಕಟ್ಟಡದ ಒಂದು ಭಾಗ ಶಿಥಿಲಗೊಂಡಿದ್ದರಿಂದ ಕುಸಿದು ಬಿದ್ದಿದೆ. ಇನ್ನೂ ಬದುಕುಳಿದವರು ಇದ್ದಾರೆಯೇ ಎಂದು ನೋಡಲು ನಾವು ಇನ್ನೂ ಹುಡುಕುತ್ತಿದ್ದೇವೆ ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಹುಮಾಯೂನ್ ಖಾನ್ ಹೇಳಿದ್ದಾರೆ.

Must Read