ಹೊಸದಿಗಂತ ಡಿಜಿಟಲ್ ಡೆಸ್ಕ್:
ನೈಜೀರಿಯಾದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಗ್ಯಾಸೋಲಿನ್ ಟ್ಯಾಂಕರ್ ಏಕಾಏಕಿ ಸ್ಫೋಟಗೊಂಡು 70 ಜನರು ಸಾವನ್ನಪ್ಪಿದ್ದಾರೆ. 56ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಎಲ್ಲಾ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂಧನ ವರ್ಗಾವಣೆ ವೇಳೆ ಅಪಘಾತ ಸಂಭವಿಸಿದೆ ಎಂದು ತಿಳಿಸಿದರು. ಒಂದು ಟ್ಯಾಂಕರ್‌ನಿಂದ ಇನ್ನೊಂದು ಟ್ಯಾಂಕರ್‌ಗೆ ಪೆಟ್ರೋಲ್ ವರ್ಗಾವಣೆಯಾಗುತ್ತಿತ್ತು. ಆಗ ಟ್ಯಾಂಕರ್‌ನಲ್ಲಿ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.
ನೈಜರ್‌ನ ಗವರ್ನರ್ ಮೊಹಮ್ಮದ್ ಬಾಗೊ ಹೇಳಿಕೆಯಲ್ಲಿ ರಾಜ್ಯದ ಡಿಕ್ಕೊ ಪ್ರದೇಶದ ಹಲವಾರು ನಿವಾಸಿಗಳು ಗ್ಯಾಸೋಲಿನ್ ಟ್ಯಾಂಕರ್‌ನಿಂದ ಭಾರಿ ಸ್ಫೋಟದಿಂದ ಗಾಯಗೊಂಡಿದ್ದಾರೆ, ಇದೊಂದು ದುರದೃಷ್ಟಕರ ಘಟನೆ ಎಂದರು.