ಹೊಸಪೇಟೆಯ ಟಿಬಿ ಡ್ಯಾಂ ಬಳಿಯ ಗುಡ್ಡದಲ್ಲಿ ಭಾರೀ ಬೆಂಕಿ, ಕಾರಣ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬಿಸಿಲಿನ ಝಳಕ್ಕೆ ಕಾದು ಕೆಂಡವಾಗಿದ್ದ ತುಂಗಭದ್ರಾ ಡ್ಯಾಂ ಬಳಿಯ ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ.

ವಿಜಯನಗರ ಜಿಲ್ಲೆಯ ಹೊಸಪೇಟೆಯ ರಾಹೆ 50ರ ಪಕ್ಕದಲ್ಲಿರೋ ಟಿಬಿ ಡ್ಯಾಂ ಬಳಿಯ ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕೆನ್ನಾಲಿಗೆಗೆ ಗುಡ್ಡ ಧಗಧಗನೆ ಹೊತ್ತಿ ಉರಿದಿದೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಈ ಕುರಿತು ಪರಿಶೀಲಿಸಿರುವ ಅರಣ್ಯಾಧಿಕಾರಿಗಳು ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದು ಅಥವಾ ಬೀಡಿ, ಸಿಗರೇಟ್ ಕಿಡಿ ಬಿದ್ದಿರಬಹುದೆಂದು ಶಂಕಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!