ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿಏನೇ ಆದರೂ ಆನ್‌ಲೈನ್ ಡೆಲಿವರಿ ಮಾತ್ರ ನಿಲ್ಲೋದಿಲ್ಲ. ಎಲ್ಲ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವ ಅಭ್ಯಾಸ ಜನರಿಗಿದೆ. ಈ ಕಾಲಕ್ಕೆ ತಕ್ಕಂತೆ ರಾಜ್ಯ ಸರ್ಕಾರ, ತನ್ನ ವ್ಯಾಪ್ತಿಯಲ್ಲಿರೋ ಮುಜರಾಯಿ ದೇಗುಲಗಳಲ್ಲಿಯೂ ಆನ್‌ಲೈನ್ ಸೇವೆ ನೀಡುತ್ತಿದೆ. ದೇವಾಲಯಗಳ ಈ ಆನ್‌ಲೈನ್ ಸೇವೆಗೆ ಅರ್ಚಕರಿಂದ ವಿರೋಧ ವ್ಯಕ್ತವಾಗುತ್ತಿದೆ.
ಆನ್‌ಲೈನ್‌ನಲ್ಲಿ ಕೆಲ ಭಕ್ತರು ಸಂಜೆ ಅಥವಾ ರಾತ್ರಿ ಅಭಿಷೇಕ, ಪ್ರಸಾದ ಇತ್ಯಾದಿ ಸೇವೆಗಳನ್ನು ಬುಕ್ ಮಾಡ್ತಾರೆ. ಮರುದಿನ ಬೆಳಗ್ಗೆಯೇ ಬುಕ್ ಮಾಡಿದ ಭಕ್ತಾದಿಗಳ ಸೇವೆ ಮಾಡಲು ಕಷ್ಟವಾಗುತ್ತದೆ. ದೇವಾಲಯಗಳಲ್ಲಿ ಪುರೋಹಿತರಿಗೆ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಇದರಿಂದ ಭಕ್ತಾದಿಗಳು ತಕ್ಷಣವೇ ಬುಕ್ಕಿಂಗ್ ಮಾಡಿದ ಮಾಹಿತಿ ದೊರಕುವುದಿಲ್ಲ. ಜೊತೆಗೆ ಪ್ರಸಾದ ಹೋಟೆಲ್ ರೀತಿ ತಕ್ಷಣವೇ ರೆಡಿ ಮಾಡಿಕೊಡಲು ಆಗುವುದಿಲ್ಲ ಎಂದು ಅರ್ಚಕರ ಒಕ್ಕೂಟ ಧಾರ್ಮಿಕ ದತ್ತಿ ಆಯುಕ್ತರಿಗೆ ಪತ್ರ ಬರೆದಿದೆ.
ಈ ಬಗ್ಗೆ ಧಾರ್ಮಿಕ ದತ್ತಿ ಇಲಾಖೆ ಏನು ಮಾಡಲಿದೆ ಎಂದು ಕಾದುನೋಡಬೇಕಿದೆ..