ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಭಾರೀ ಆಕ್ರೋಶ: ರಾಜೀನಾಮೆಗೆ ಬಿಜೆಪಿ ಆಗ್ರಹ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ಕೊಲ್ಕತ್ತಾದ ಆರ್​.ಜಿ. ಕರ್ ಕಾಲೇಜಿನಲ್ಲಿ ವೈದ್ಯೆಯ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶವನ್ನೇ ತಲೆ ತಗ್ಗಿಸುವಂತೆ ಮಾಡಿದೆ.

ದೇಶಾದ್ಯಂತ ಬೀದಿಗಿಳಿದು ಹೋರಾಟಕ್ಕೆ ವೈದರು ಸಜ್ಜಾಗಿದ್ದಾರೆ. ಇದರ ಮಧ್ಯೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಯವರ ರಾಜೀನಾಮೆಗಾಗಿ ವಿಪಕ್ಷಗಳು ಪಟ್ಟು ಹಿಡಿದಿದ್ದವು. ಈಗ ಸಿಎಂ ಮಮತಾ ಬ್ಯಾನರ್ಜಿಯೇ ಪ್ರತಿಭಟನೆಯ ಅಖಾಡಕ್ಕೆ ಇಳಿದಿದ್ದಾರೆ.

ಸ್ಥಳೀಯರು ಪೊಲೀಸರಿಂದ ಸರಿಯಾದ ತನಿಖೆ ನಡೆಯುತ್ತಲ್ಲೇ ಎಂದು ಸ್ಪಷ್ಟಪಡಿಸಿದ ಕೊಲ್ಕತ್ತಾ ನ್ಯಾಯಾಲಯ ಪ್ರಕರಣವನ್ನು ಸಿಬಿಐಗೆ ವಹಿಸಿತು. ಇದರ ನಡುವೆ ಸ್ಥಳೀಯ ಪೊಲೀಸರು ಘಟನೆ ನಡೆದು ನಾಲ್ಕು ದಿನವಾದರೂ ಪ್ರಕರಣಕ್ಕೆ ಸಂಬಂಧಿಸಿಂತೆ ಒಬ್ಬರನ್ನೇ ಬಂಧಿಸಿದ್ದಾರೆ. ನಮಗೆ ಇದು ಸಾಮೂಹಿಕ ಅತ್ಯಾಚಾರದಂತೆ ಭಾಸವಾಗುತ್ತಿದೆ. ಪ್ರಭಾವಿಗಳು ರಕ್ಷಿಸುವ ಕೆಲಸ ನಡೆಯುತ್ತಿದೆ ಎಂದು ಸಂತ್ರಸ್ತೆಯ ಪೋಷಕರು ದೂರು ನೀಡಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ದೀದಿ ಕುರ್ಚಿಯನ್ನು ಅಲ್ಲಾಡುವಂತೆ ಮಾಡಿತ್ತು.

ಸದ್ಯ ಮಮತಾ ಬ್ಯಾನರ್ಜಿ ಖುದ್ದು ತಾವೇ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಆರ್ ಜಿ ಕರ್ ಮೆಡಿಕಲ್ ಕಾಲೇಜಿನಲ್ಲಾದ ಘಟನೆಯನ್ನು ಅಭಯಾ ಪ್ರಕರಣ ಎಂದು ಹೆಸರಿಸಿ ರಸ್ತೆಗಿಳಿದು ರ್ಯಾಲಿ ಮಾಡಿದ್ರು. ನಿರ್ಭಯದ ರೀತಿಯಲ್ಲಿಯೇ ಈ ಘಟನೆಯನ್ನು ಅಭಯಾ ಎಂದು ಕರೆಯುವ ಮೂಲಕ ಬೀದಿಗಿಳಿದು ರ್ಯಾಲಿ ನಡೆಸಿದ ದೀದಿ. ಬಿಜೆಪಿ ಹಾಗೂ ಎಡಪಕ್ಷಗಳು ಈ ಘಟನೆಯನ್ನು ರಾಜಕೀಯಗೊಳಿಸುತ್ತಿದೆ. ಪ್ರಕರಣದಲ್ಲಿ ಯಾರೇ ಇದ್ದರೂ ಕೂಡ ಅವರಿಗೆ ತಕ್ಕ ಶಿಕ್ಷೆಯಾಗಬೇಕು. ಮತ್ತೊಮ್ಮೆ ಈ ರೀತಿಯಾದ ಕೆಲಸಕ್ಕೆ ಕೈಹಾಕುವವರು ಸಾವಿರ ಬಾರಿ ಯೋಚನೆ ಮಾಡಬೇಕು ಅಂತಹ ಶಿಕ್ಷೆ ಅಪರಾಧಿಗಳಿಗೆ ಆಗಬೇಕು ಅಂತ ಕಿಡಿಕಾರಿದ್ದಾರೆ.

ಇತ್ತ ಮಮತಾ ಬ್ಯಾನರ್ಜಿ ರಾಜೀನಾಮೆಗೆ ಒತ್ತಯ ಕೇಳಿಬರುತ್ತಿದ್ದು,ಇಡೀ ಪೊಲೀಸ್ ವ್ಯವಸ್ಥೆಯೇ ಸಿಎಂ ಕೈಯಲ್ಲಿ ಇರುತ್ತೆ. ಅದರಿಂದ ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಡಿಸುವುದು ಬಿಟ್ಟು, ತಮ್ಮದೇ ಸರ್ಕಾರದ ತಪ್ಪಿಟ್ಟುಕೊಂಡು ಅವರೇ ಬೀದಿಗಿಳಿದು ಹೋರಾಟಕ್ಕೆ ನಿಂತಿರುವುದು ನಿಜಕ್ಕೂ ಖೇದಕರ ಅನೇಕರು ಮಾತನಾಡಲು ಶುರು ಮಾಡಿದ್ದಾರೆ.

ಸಿಎಂ ಮಮತಾ ಬ್ಯಾನರ್ಜಿ ರಾಜೀನಾಮೆಗೆ ಬಿಜೆಪಿ ಆಗ್ರಹ
ಸಿಎಂ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಒತ್ತಾಯಿಸಿದರು. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪೂನಾವಾಲಾ, ಐಎನ್‌ಡಿಐಎ ಬ್ಲಾಕ್ ಈ ಪ್ರಕರಣದಲ್ಲಿ ಏಕೆ ಮೌನಕ್ಕೆ ಶರಣಾಗಿದೆ? ಎಂದು ಪ್ರಶ್ನಿಸಿದರು.

ಪಶ್ಚಿಮ ಬಂಗಾಳದಲ್ಲಿ ಕಾನೂನಿನ ನಿಯಮವಿಲ್ಲ ಎಂದು ಆರೋಪಿಸಿದ ಬಿಜೆಪಿ ನಾಯಕ ಪೂನಾವಾಲಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಕೃತ್ಯದ ಅಪರಾಧಿಗಳನ್ನು ಉಳಿಸಲು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಅವರು ಮೃತ ಯುವತಿಗೆ ನ್ಯಾಯ ಕೊಡಿಸುವ ಬಗ್ಗೆ ಗಮನಹರಿಸುತ್ತಿಲ್ಲ. ಆರೋಪಿಗಳು ಈ ಪ್ರಕರಣದಲ್ಲಿ ಟಿಎಂಸಿ ಜೊತೆಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ರಾಷ್ಟ್ರೀಯ ವಕ್ತಾರೆ ಶಾಜಿಯಾ ಇಲ್ಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಬಗ್ಗೆ ಸಮರ್ಥ ಅಧಿಕಾರಿಗಳು ನಿರ್ಧರಿಸಬೇಕು. ಮಹಿಳೆಯರ ಸುರಕ್ಷತೆಗೆ ಧಕ್ಕೆ ಉಂಟಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಬಗ್ಗೆ ಸಮರ್ಥ ಅಧಿಕಾರಿಗಳು ನಿರ್ಧರಿಸಬೇಕು ಎಂದು ಹೇಳಿದರು.

 

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!