ಹೊಸದಿಗಂತ ಡಿಜಿಟಲ್ ಡೆಸ್ಕ್ :
ಮಣಿಪುರದಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ 48 ಗಂಟೆಗಳಲ್ಲಿ ಹಲವಾರು ನಿಷೇಧಿತ ಸಂಘಟನೆಗಳ ಒಟ್ಟು 16 ಉಗ್ರರನ್ನು ಬಂಧಿಸಿದ್ದಾರೆ .
ಈ ಕುರಿತು ಭಾನುವಾರ ಮಾಹಿತಿ ನೀಡಿದ ಪೊಲೀಸರು, ನಿಷೇಧಿತ ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್(ಪಂಬೈ)ನ ಇಬ್ಬರು ಕಾರ್ಯಕರ್ತರನ್ನು ಇಂಫಾಲ್ ಪೂರ್ವ ಜಿಲ್ಲೆಯ ನೊಂಗ್‌ಡ್ಯಾಮ್ ಗ್ರಾಮದ ಬಳಿಯ ನಾಪೆಟ್‌ಪಲ್ಲಿ ಆಂಡ್ರೊ ರಸ್ತೆಯಲ್ಲಿ ಶನಿವಾರ ಬಂಧಿಸಲಾಗಿದೆ.ಬಂಧಿತ ಉಗ್ರರು ಸುಲಿಗೆಯಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ಬಿಷ್ಣುಪುರ ಜಿಲ್ಲೆಯ ನಿಂಗ್‌ಥೌಖೋಂಗ್ ವಾರ್ಡ್ ಸಂಖ್ಯೆ 13 ರಿಂದ ನಿಷೇಧಿತ ಕಾಂಗ್ಲೀಪಾಕ್ ಕಮ್ಯುನಿಸ್ಟ್ ಪಕ್ಷದ (ತೈಬಂಗನ್ಬಾ) ಒಬ್ಬ ಸದಸ್ಯನನ್ನು ಭದ್ರತಾ ಪಡೆಗಳು ಬಂಧಿಸಿವೆ.ಜೊತೆಗೆ ಇಂಫಾಲ್ ಪಶ್ಚಿಮ ಜಿಲ್ಲೆಯ ಸಲಾಮ್ ಮಾಮಾಂಗ್ ಲೀಕೈ ಕೇತುಕಿ ಲ್ಯಾಂಪಕ್‌ನಿಂದ ನಿಷೇಧಿತ ಕೆಸಿಪಿ(ಎಂಎಫ್‌ಎಲ್)ನ ಇಬ್ಬರು ಸದಸ್ಯರನ್ನು ವಶಕ್ಕೆ ಪಡೆಯಾಗಲಿದೆ.ಎಂದು ಅವರು ಹೇಳಿದ್ದಾರೆ.