ಗೇಮಿಂಗ್ ಕ್ಷೇತ್ರದಲ್ಲಿ ಭಾರೀ ಮುನ್ನಡೆ, 2028ರ ವೇಳೆಗೆ 30 ಸಾವಿರ ಉದ್ಯೋಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗೇಮಿಂಗ್ ಕ್ಷೇತ್ರದಲ್ಲಿ ಕರ್ನಾಟಕ ಭಾರೀ ಮುನ್ನಡೆ ಸಾಧಿಸಲಿದೆ, ಇನ್ನೇನು ಕೆಲವೇ ವರ್ಷಗಳಲ್ಲಿ ಸಾವಿರಾರು ಮಂದಿಗೆ ಉದ್ಯೋಗ ಸಿಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಅನಿಮೇಷನ್, ಗೇಮಿಂಗ್ ಹಾಗೂ ಕಾಮಿಕ್ಸ್ ಕ್ಷೇತ್ರದಲ್ಲಿ ರಾಜ್ಯ ಮುನ್ನಡೆ ಸಾಧಿಸಿದೆ. 2028ರ ವೇಳೆಗೆ 30 ಸಾವಿರ ಉದ್ಯೋಗ ಸೃಷ್ಟಿ ಮಾಡುವ ಗುರಿ ಹೊಂದಲಾಗಿದೆ ಎಂದಿದ್ದಾರೆ.

ರಫ್ತು ಪ್ರಮಾಣವನ್ನು ಶೇ.80ಕ್ಕೆ ಹೆಚ್ಚಿಸುವ ಯೋಜನೆ ಮಾಡಿದ್ದು, ಕಲಿಕೆ, ಪ್ರವೃತ್ತಿ ಹಾಗೂ ಸವಾಲುಗಳ ಮೇಲೆ ಕೆಲಸ ಮಾಡಲಾಗುತ್ತದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!