ಕುಸ್ತಿಪಟುಗಳಿಂದ ಬೃಹತ್ ಪ್ರತಿಭಟನೆ: ಅಸೋಸಿಯೇಷನ್ ಮುಂದೆ ಇಟ್ಟರು 4 ಬೇಡಿಕೆಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಶೋಷಣೆ ನೀಡಿದ ಪ್ರಕರಣದ ಸಂಬಂಧ ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್​ಐ) ಅಧ್ಯಕ್ಷ ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ಪದಚ್ಯುತಗೊಳಿಸಬೇಕೆಂದು ಒತ್ತಾಯಿಸಿನಡೆಯುತ್ತಿರುವ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ.

ದೆಹಲಿಯ ಜಂತರ್​ ಮಂತರ್​ ಮೈದಾನದಲ್ಲಿ ಒಲಿಂಪಿಕ್ಸ್​ ಪದಕ ವಿಜೇತ ಕುಸ್ತಿಪಟುಗಳಾದ ಭಜರಂಗ್​ ಪೂನಿಯಾ, ರವಿಕುಮಾರ್​ ದಹಿಯಾ, ಸಾಕ್ಷಿ ಮಲಿಕ್​, ಒಲಿಂಪಿಯನ್​ ವಿನೇಶ್​ ಪೂಗಟ್​ ಸೇರಿದಂತೆ ಪ್ರಮುಖ ಕುಸ್ತಿಪಟುಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ.
ಉತ್ತರ ಪ್ರದೇಶದ ಲಖನೌದ ರಾಷ್ಟ್ರೀಯ ಶಿಬಿರದಲ್ಲಿ ಹಲವಾರು ತರಬೇತುದಾರರು ಮಹಿಳಾ ಕುಸ್ತಿಪಟುಗಳನ್ನು ಶೋಷಿಸಿದ್ದಾರೆ ಎಂದು ಕುಸ್ತಿಪಟುಗಳು ಆರೋಪಿಸಿದ್ದಾರೆ, ಆರೋಪಗಳ ತನಿಖೆಗಾಗಿ ಸರ್ಕಾರವು ಮೂರು ಸದಸ್ಯರ ಸಮಿತಿಯನ್ನು ರಚಿಸುವಂತೆ ಒತ್ತಾಯಿಸಿದ್ದಾರೆ.

ಇದರ ನಡುವೆ ಕೇಂದ್ರ ಕ್ರೀಡಾ ಸಚಿವ ಅನುರಾಗ್​ ಠಾಕೂರ್​ ಗುರುವಾರ ರಾತ್ರಿ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬ್ರಿಜ್​ ಭೂಷಣ್​ ಅವರನ್ನು ಸ್ಥಾನದಿಂದ ಕೆಳಗಿಳಿಸುವಂತೆ ಕುಸ್ತಿಪಟುಗಳು ಒತ್ತಾಯಿಸಿದ್ದು, ಈಗಾಗಲೇ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ ಎಂದು ಕ್ರೀಡಾ ಸಚಿವರು ಕುಸ್ತಿಪಟುಗಳಿಗೆ ಭರವಸೆ ನೀಡಿದ್ದಾರೆ.

ಇಂಡಿಯನ್​ ಒಲಿಂಪಿಕ್ಸ್​ ಅಸೊಸಿಯೇಷನ್​ಗೆ ದೂರು ನೀಡಿರುವ ಪ್ರತಿಭಟನಾ ನಿರತ ಕುಸ್ತಿಪಟುಗಳು, ನಾಲ್ಕು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

1. ಆರೋಪದ ಬಗ್ಗೆ ತನಿಖೆ ನಡೆಸಲು ತಕ್ಷಣ ಸಮಿತಿಯೊಂದನ್ನು ರಚಿಬೇಕು
2. ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ರಾಜೀನಾಮೆ ಪಡೆಯಬೇಕು
3. ಭಾರತೀಯ ಕುಸ್ತಿ ಒಕ್ಕೂಟವನ್ನು ವಿಸರ್ಜಿಸಬೇಕು
4. ಕುಸ್ತಿಪಟುಗಳೊಂದಿಗೆ ಸಮಾಲೋಚನೆ ನಡೆಸಿ ಭಾರತೀಯ ಕುಸ್ತಿ ಒಕ್ಕೂಟವನ್ನು ನಡೆಸಲು ಸಮಿತಿಯನ್ನು ರಚಿಸಬೇಕು

ಆದ್ರೆ ತಮ್ಮ ವಿರುದ್ಧ ಬಂದಿರುವ ಆರೋಪವನ್ನು ಬ್ರಿಜ್​ ಭೂಷಣ್​ ತಳ್ಳಿ ಹಾಕಿದ್ದು, ಎಲ್ಲ ಆರೋಪಗಳು ಆಧಾರರಹಿತ ಎಂದಿದ್ದಾರೆ. ಯಾರ ಕರುಣೆಯಿಂದಲೂ ನಾನು ಆ ಸ್ಥಾನದಲ್ಲಿ ಕುಳಿತಿಲ್ಲ. ಸಾರ್ವಜನಿಕರಿಂದ ಆಯ್ಕೆಯಾಗಿದ್ದಾನೆ ಎಂದು ಬ್ರಿಜ್ ಭೂಷಣ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!