ಭಯಾನಕ ವಿಡಿಯೋ: ಹೆದ್ದಾರಿಯಲ್ಲಿ ಬೃಹತ್‌ ಬಂಡೆ ಅಪ್ಪಳಿಸಿ ಕಾರು ಧ್ವಂಸ, ಇಬ್ಬರ ದಾರುಣ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಾಗಾಲ್ಯಾಂಡ್‌ನಲ್ಲಿ ದಿಮಾಪುರ್ ಜಿಲ್ಲೆಯಲ್ಲಿ ಮಂಗಳವಾರ ಸುರಿದ ಭಾರಿ ಮಳೆಗೆ ಬೆಟ್ಟದಿಂದ ಉರುಳಿ ಬಿದ್ದ ಬೃಹತ್ ಗಾತ್ರದ ಬಂಡೆಗಳು ರಸ್ತೆಯಲ್ಲಿ ನಿಂತಿದ್ದ ಎರಡು ಕಾರುಗಳನ್ನು ಧ್ವಂಸಗೊಳಿಸಿತು. ಅದರ ಪರಿಣಾಮ ಕಾರುಗಳಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಂಜೆ 5 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 29ರ ಚೆಕ್​ಪೋಸ್ಟ್​ ಬಳಿಕ ಚುಮೌಕೆಡಿಮಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬಂಡೆಗಳಿಂದ ನಜ್ಜುಗುಜ್ಜಾದ ಕಾರುಗಳ ಹಿಂದಿದ್ದ ಮತ್ತೊಂದು ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮರಾದಲ್ಲಿ ಅವಘಡದ ದೃಶ್ಯ ಸೆರೆಯಾಗಿದೆ.

ಈ ಅವಘಡ ಸಂಭವಿಸಿದ ಸ್ಥಳವನ್ನು ಸಾಮಾನ್ಯವಾಗಿ “ಪಕಲಾ ಪಹಾರ್” ಎಂದು ಕರೆಯಲಾಗುತ್ತದೆ. ಭೂಕುಸಿತ ಮತ್ತು ಬಂಡೆಗಳ ಕುಸಿತಕ್ಕೆ ಹೆಚ್ಚು ಕುಖ್ಯಾತಿ ಗಳಿಸಿದೆ. ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

https://twitter.com/ANI/status/1676262872584970241?s=20

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!