ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಸ್ಟರ್ ಆನಂದ್ ನಟನೆಯ ʻನಾ ಕೋಳಿಕ್ಕೆ ರಂಗʼ ಸಿನಿಮಾ ಇದೇ ನವೆಂಬರ್ 10ರಂದು ತೆರೆ ಕಾಣಲು ಸಜ್ಜಾಗಿದೆ.
ಸಿನಿಮಾದಲ್ಲಿ ಭವ್ಯಾ ಅವರು ತಾಯಿಯ ಪಾತ್ರ ಕಾಣಿಸಿಕೊಂಡಿದ್ದಾರೆ. ಇದೊಂದು ಟ್ರಯಂಗಲ್ ಪ್ರೇಮ ಕಥನ ಜೊತೆಗೆ ಕೋಳಿ ರಂಗ ಮತ್ತು ಅಮ್ಮನ ವಾತ್ಸಲ್ಯದ ಕಥೆ ಇದೆ. ಅಲ್ಲದೆ ಇದೊಂದು ಹಳ್ಳಿ ಸೊಗಡಿನ ಕಥೆಯಾಗಿದೆ.
ರಾಜೇಶ್ವರಿ ನಾಯಕಿಯಾಗಿ ಚಿತ್ರದಲ್ಲಿ ನಟಿಸಿದ್ದಾರೆ. ಕಾಮಿಡಿ ಕಿಲಾಡಿ ತಂಡ ಕೂಡ ನಟಿಸಿದೆ. ಸೋಮಶೇಖರ್ ನಿರ್ಮಾಣ, ರಾಜು ಎಮ್ಮಿಗನೂರು ಸಂಗೀತ ಇದೆ. ಗೊರವಾಲೆ ಮಹೇಶ್ ಈ ಚಿತ್ರದ ನಿರ್ದೇಶಕರು. ಚಿತ್ರಕ್ಕೆ ಧನಪಾಲ್ ಮತ್ತು ಬೆಟ್ಟೇಗೌಡ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ಶೋಭರಾಜ್, ಹೊನ್ನವಳ್ಳಿ ಕೃಷ್ಣ, ಪುಂಗ, ಶಕೀಲಾ,ಇತರರು ಕಾಣಿಸಿಕೊಂಡಿದ್ದಾರೆ.