ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ವಾಯುಮಾಲೀನ್ಯ ಹೆಚ್ಚಾಗುತ್ತಿದೆ. ಇದಕ್ಕಾಗಿ ಪರಿಸರ ಮತ್ತು ನಗರಾಭಿವೃದ್ಧಿ ಇಲಾಖೆಗಳು ನಾಲ್ಕು ಅಂಶಗಳುಳ್ಳ ಮಾಸ್ಟರ್ ಪ್ಲ್ಯಾನ್ ತಯಾರಿಸಿದ್ದಾರೆ.
ಇದನ್ನು ಸರ್ಕಾರದ ಮುಂದಿಟ್ಟಿದ್ದು, ತಾತ್ವಿಕ ಒಪ್ಪಿಗೆಯೂ ಸಿಕ್ಕಿದೆ. ಯಾವುದೀ ನಾಲ್ಕು ಅಂಶಗಳು..
- ಚಳಿಗಾಲದಲ್ಲಿ ಮಕ್ಕಳು ಅತಿ ಹೆಚ್ಚು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ.ಚಳಿಗಾಲದಲ್ಲಿ ವಾಯುಮಾಲೀನ್ಯವೂ ಹೆಚ್ಚು. ಹೀಗಾಗಿ ಚಳಿಗಾಲದಲ್ಲಿ ರಜೆ ಹೆಚ್ಚಿಸಿ ಬೇಸಿಗೆಗಾಲದಲ್ಲಿ ರಜೆ ಕಡಿತಗೊಳಿಸುವುದು. ಮಕ್ಕಳಿಗೆ ಮನೆಯಲ್ಲೇ ಹೋಮ್‌ವರ್ಕ್ ಮಾಡಿಸುವುದು.
- ಕಾರ್ಪೋರೆಟ್ ಉದ್ಯೋಗಿಗಳು ಹಾಗೂ ಟೆಕ್ಕಿಗಳಿಗೆ ವರ್ಕ್ ಫ್ರಂ ಹೋಮ್ ನೀಡುವುದು. ಹೆಚ್ಚಿನ ಮಂದಿ ಓಡಾಟದಿಂದಲೇ ವಾಯು ಮಾಲೀನ್ಯ ಹೆಚ್ಚಾಗುತ್ತದೆ. ಹೀಗಾಗಿ ವರ್ಕ್ ಫ್ರಮ್ ಹೋಮ್ ನೀಡಬೇಕು. ಇದರಿಂದ ಪ್ರವಾಸೋದ್ಯಮ ಉತ್ತೇಜನವೂ ಸಾಧ್ಯ.
- ಚಳಿಗಾಲದಲ್ಲಿ ನಿರಂತರ ವಿದ್ಯುತ್ ಸಪ್ಲೇ ಇರಬೇಕು. ವಿದ್ಯುತ್ ಇಲ್ಲದೆ ಜನರು ಡೀಸೆಲ್ ಜನರೇಟರ್ ಹಾಗೂ ಇತರ ಮೂಲಗಳ ಬಳಕೆ ಮಾಡದಂತೆ ತಡೆಯಬೇಕು.
- ಕೈಗಾರಿಕೆಗಳು ವರ್ಷವಿಡೀ ಕೈಗೊಳ್ಳುವ ವಾರ್ಷಿಕ ನಿರ್ವಹಣಾ ಕಾರ್ಯಗಳನ್ನು ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಮಾಡುವಂತೆ ಸೂಚಿಸಬೇಕು. ಇದು ಮಾಲೀನ್ಯ ಹೊರಸೂಸುವಿಕೆ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ.