ಶಂಕಿತ ಉಗ್ರರ ಮೇಲೆ ನಿಗಾ ಇರಿಸಲು ಮಾಸ್ಟರ್ ಪ್ಲಾನ್: ಕಾಶ್ಮೀರ ಪೊಲೀಸರರಿಂದ ಜಿಪಿಎಸ್‌ ಟ್ರ್ಯಾಕರ್‌ ಅಳವಡಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ, ಒಳನುಸುಳುವಿಕೆ ತಡೆಯಲು ಜಮ್ಮು-ಕಾಶ್ಮೀರ ಪೊಲೀಸರು ಜಿಪಿಎಸ್‌ ಟ್ರ್ಯಾಕರ್‌ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ. ಆ ಮೂಲಕ ದೇಶದಲ್ಲಿಯೇ ಮೊದಲ ಬಾರಿಗೆ ಶಂಕಿತ ಉಗ್ರರ ಮೇಲೆ ನಿಗಾ ಇರಿಸಲು ಜಿಪಿಎಸ್‌ ಟ್ರ್ಯಾಕರ್‌ (GPS Tracker) ಬಳಿಸಿದ ಮೊದಲ ಪೊಲೀಸ್‌ ಇಲಾಖೆ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಬಂಧಿತರಾಗಿರುವ ಶಂಕಿತ ಉಗ್ರರು ಜಾಮೀನು ಪಡೆದು ಜೈಲಿನಿಂದ ಹೊರಗೆ ಬಿಡುವಾಗ ಅವರ ಪಾದಕ್ಕೆ ಜಿಪಿಎಸ್‌ ಟ್ರ್ಯಾಕರ್‌ ಅಳವಡಿಸಲಾಗುತ್ತದೆ. ಇದರಿಂದ ಶಂಕಿತ ಉಗ್ರರು ಜೈಲಿನ ಹೊರಗೆ ಕೈಗೊಳ್ಳುವ ಚಟುವಟಿಕೆಗಳು, ಚಲನವಲನಗಳ ಮೇಲೆ ನಿಗಾ ಇರಿಸಲು ಸಾಧ್ಯವಾಗುತ್ತದೆ. ಜಾಮೀನಿಗೆ ಅರ್ಜಿ ಸಲ್ಲಿಸಿರುವ ಗುಲಾಂ ಮೊಹಮ್ಮದ್‌ ಭಟ್‌ ಎಂಬ ಶಂಕಿತ ಉಗ್ರನಿಗೆ ಜಿಪಿಎಸ್‌ ಅಳವಡಿಸುವ ಮೂಲಕ ಜಮ್ಮು-ಕಾಶ್ಮೀರ ಪೊಲೀಸರು ತಂತ್ರಜ್ಞಾನದ ಬಳಕೆ ಆರಂಭಿಸಿದ್ದಾರೆ.

ಶಂಕಿತ ಉಗ್ರರು ಸೇರಿ ಯಾವುದೇ ಅಪರಾಧದ ಆರೋಪ ಹೊತ್ತಿರುವವರ ಮೇಲೆ ನಿಗಾ ಇರಿಸಲು ಬೇರೆ ದೇಶಗಳಲ್ಲಿ ಈಗಾಗಲೇ ಜಿಪಿಎಸ್‌ ಟ್ರ್ಯಾಕರ್‌ ತಂತ್ರಜ್ಞಾನದ ಬಳಕೆ ಮಾಡಲಾಗುತ್ತಿದೆ. ಅಮೆರಿಕ, ಬ್ರಿಟನ್‌, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್‌ ಸೇರಿ ಹಲವು ದೇಶಗಳಲ್ಲಿ ಜಾಮೀನು ಪಡೆದು, ಪರೋಲ್‌ ಮೇಲೆ ಜೈಲಿನಿಂದ ಹೊರಬಂದವರ ಮೇಲೆ ಜಿಪಿಎಸ್‌ ಟ್ರ್ಯಾಕರ್‌ ಮೂಲಕವೇ ನಿಗಾ ಇರಿಸಲಾಗುತ್ತಿದೆ. ಇದರಿಂದ ಭವಿಷ್ಯದಲ್ಲಿ ಎಸಗಬಹುದಾದ ದಾಳಿ, ಅಪರಾಧಗಳನ್ನು ನಿಗ್ರಹಿಸಲು ಸಾಧ್ಯವಾಗಿದೆ ಎಂದು ತಿಳಿದುಬಂದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!