ಶಾಸಕಿ ರೂಪಾಲಿ ಮನವಿಗೆ ಸ್ಪಂದನೆ: ಅಂಕೋಲಾ ಕ್ರೀಡಾಂಗಣಕ್ಕೆ ರಾಜ್ಯ ಸರಕಾರದಿಂದ 2 ಕೋಟಿ ರೂ.!

ಹೊಸದಿಗಂತ ವರದಿ,ಕಾರವಾರ:

ಶಾಸಕರಾದ ರೂಪಾಲಿ ಎಸ್.ನಾಯ್ಕ ಅವರ ಮನವಿಯ ಮೇರೆಗೆ ಅಂಕೋಲಾದ ತಾಲ್ಲೂಕು ಕ್ರೀಡಾಂಗಣದ ಅಭಿವೃದ್ಧಿಗಾಗಿ ಸರ್ಕಾರ 2 ಕೋಟಿ ರೂ. ಗಳಿಗೆ ಆಡಳಿತಾತ್ಮಕ ಮಂಜೂರಿ ನೀಡಿ ಆದೇಶಿಸಿದೆ. ಇದಲ್ಲದೆ 50 ಲಕ್ಷ ರೂ. ಬಿಡುಗಡೆಯಾಗಿದೆ.
ತಾಲ್ಲೂಕು ಕ್ರೀಡಾಂಗಣದಲ್ಲಿ ಅಗತ್ಯ ಸೌಲಭ್ಯಗಳು ಇಲ್ಲದೆ ಕ್ರೀಡಾಪಟುಗಳು ಅವಕಾಶದಿಂದ ವಂಚಿತರಾಗುತ್ತಿರುವುದನ್ನು ಹಾಗೂ ಅಂಕೋಲಾ ತಾಲ್ಲೂಕಿನ ಕ್ರೀಡಾಪಟುಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ಕ್ರೀಡಾಂಗಣ ಅಭಿವೃದ್ಧಿಗೆ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ರೂಪಾಲಿ ಎಸ್.ನಾಯ್ಕ ಸರ್ಕಾರಕ್ಕೆ ಮನವಿ ಮಾಡಿದ್ದರು. ಶಾಸಕರ ಬೇಡಿಕೆ ಹಿನ್ನೆಲೆಯಲ್ಲಿ ಸರ್ಕಾರ 2 ಕೋಟಿ ರೂ. ನೀಡಲು ಅನುಮೋದನೆ ನೀಡಿದೆ.
ಈ ಅನುದಾನವನ್ನು ಕ್ರೀಡಾಂಗಣಕ್ಕೆ ಅತ್ಯಗತ್ಯವಾದ ಆವರಣ ಗೋಡೆ, 400 ಮೀಟರ್ ಟ್ರ್ಯಾಕ್, ಕಬಡ್ಡಿ, ವಾಲಿಬಾಲ್, ಖೋಖೋ ಅಂಕಣ, ಗ್ಯಾಲರಿ ಹಾಗೂ ಕ್ರೀಡಾಂಗಣದ ಸುತ್ತ ಚರಂಡಿ ನಿರ್ಮಾಣಕ್ಕೆ ಬಳಸಲಾಗುವುದು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!