ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾರಿನಲ್ಲಿ ಮಸೀದಿಯೊಳಗೆ ನುಗ್ಗಿಮಥುರಾದ ಶಾಹಿ ಈದ್ಗಾ ಮಸೀದಿಯನ್ನು ಸ್ಫೋಟಿಸುವುದಾಗಿ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದಾನೆ.
ಆತ ಕಾರನ್ನು ಲಾಕ್ ಮಾಡಿಕೊಂಡು ಪೆಟ್ರೋಲ್ ಸುರಿದುಕೊಂಡಿದ್ದ, ಪೊಲೀಸರು ಗಾಜನ್ನು ಒಡೆದು ಆತನನ್ನು ಹೊರಗೆ ಕರೆತಂದಿದ್ದಾರೆ. ಜಮುನಾಪರ್ ಮೀರಾ ವಿಹಾರ್ ಕಾಲೋನಿ ನಿವಾಸಿ ಪುಷ್ಪೇಂದ್ರ ಚೌಧರಿ ತಾನು ಮಸೀದಿ ಸ್ಫೋಟಿಸಲು ಬಂದಿದ್ದೇನೆ ಎಂದು ಹೇಳಿದ್ದಾನೆ.
ಪೊಲೀಸರು ಸಂಪೂರ್ಣ ತನಿಖೆ ನಡೆಸಿದಾಗ ಆತನ ನಾಲ್ವರು ಪುತ್ರರು ಮೃತಪಟ್ಟಿದ್ದು, ಮಾನಸಿಕ ಅಸ್ವಸ್ಥನಾಗಿದ್ದ ಎಂದು ತಿಳಿದುಬಂದಿದೆ. ಸಂಜೆವರೆಗೂ ಕಸ್ಟಡಿಯಲ್ಲಿ ಇರಿಸಿಕೊಂಡು ನಂತರ ಆತನನ್ನು ವಾಪಾಸ್ ಕಳುಹಿಸಲಾಗಿದೆ.
ಪತ್ನಿ ಪ್ರವೇಶ್ ಮೂರು ತಿಂಗಳ ಹಿಂದೆ ಹೆರಿಗೆಯಾಗಿದ್ದು, ಅದರಲ್ಲಿ ಮಗು ಮೃತಪಟ್ಟಿದೆ. ಇದಕ್ಕೂ ಮುನ್ನ ಅವರ ಮೂವರು ಪುತ್ರರು ಮೃತಪಟ್ಟಿದ್ದರು. ಇದರಿಂದ ಆತ ಮಾನಸಿಕವಾಗಿ ನೊಂದಿದ್ದ ಎನ್ನಲಾಗಿದೆ.